Select Your Language

Notifications

webdunia
webdunia
webdunia
webdunia

ಪಂಚಕಜ್ಜಾಯ ಪ್ರಸಾದಕ್ಕೆ ಭಾರೀ ಮೆಚ್ಚುಗೆ

Panchkajjaya Prasad
ಉಡುಪಿ , ಭಾನುವಾರ, 24 ಸೆಪ್ಟಂಬರ್ 2023 (17:22 IST)
ಉಡುಪಿಯ ಶ್ರೀ ವೆಂಕಟರಮಣ ದೇವಸ್ಥಾನದ ಪಂಚಕಜ್ಜಾಯ ಬಗ್ಗೆ ಅಂತರಾಷ್ಟೀಯ ಚೆಫ್ ವಿಕಾಸ್ ಖನ್ನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಕಳ ಪಡು ತಿರುಪತಿ ಖ್ಯಾತಿಯ ಶ್ರೀ ವೆಂಕಟ ರಮಣ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿದ ವಿಕಾಸ್ ಖನ್ನಾ, ಪಂಚಕಜ್ಜಾಯದ ರುಚಿಗೆ ಫಿದಾ ಆಗಿದ್ದೇನು ಎಂದು ಹೇಳಿರುವ ಹೇಳಿಕೆ ಎಲ್ಲೆಡೆ ವೈರಲ್ ಆಗಿದೆ. ಮೂಲತಹ ಉಡುಪಿ ಮಣಿಪಾಲದಲ್ಲಿ ವಿದ್ಯಾಭ್ಯಾಸ ನಡೆಸಿರುವ ವಿಕಾಸ್ ಖನ್ನಾ, ಭಾರತದ ಸ್ಟಾರ್ ಹೊಟೇಲ್‌ಗಳಲ್ಲಿ ಕೆಲಸ ನಿರ್ವಹಿಸಿ, ಬಳಿಕ ಅಮೆರಿಕಾದಲ್ಲಿ ನೆಲೆಸಿದ್ರು. ನಂತರ, ಹಲವು ರಾಷ್ಟ್ರಗಳಲ್ಲಿ ಸರಣಿ ಹೊಟೇಲ್ ಆರಂಭಿಸಿ ಯಶಸ್ಸು ‌ಕಂಡು ಪ್ರಖ್ಯಾತಿ ಪಡೆದಿದ್ದಾರೆ. ಸದ್ಯ ಇವರ ಮೆಚ್ಚುಗೆಯಿಂದ ವೆಂಕಟರಮಣ ದೇವಸ್ಥಾನದ ಪ್ರಸಾದ ಇದೀಗ ದೇಶದೆಲ್ಲೆಡೆ ಸಂಚಲನ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುತಾಲಿಕ್ ವಿರುದ್ಧ ಕೇಸ್;ಶ್ರೀರಾಮ ಸೇನೆ ಪ್ರೊಟೆಸ್ಟ್