Select Your Language

Notifications

webdunia
webdunia
webdunia
webdunia

Hubli: ಹುಬ್ಬಳ್ಳಿ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಸಂಖ್ಯೆ 8 ಕ್ಕೆ ಏರಿಕೆ: ಉಳಿದವರು ಈಗ ಒಬ್ಬರೇ

Hubli

Krishnaveni K

ಹುಬ್ಬಳ್ಳಿ , ಮಂಗಳವಾರ, 31 ಡಿಸೆಂಬರ್ 2024 (10:46 IST)
Photo Credit: X
ಹುಬ್ಬಳ್ಳಿ: ಇಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳ ಸಂಖ್ಯೆ ಈಗ 8 ಕ್ಕೆ ಏರಿಕೆಯಾಗಿದೆ. ಇದೀಗ ಒಬ್ಬಾತ ಮಾತ್ರ ಬದುಕಿ ಉಳಿದಂತಾಗಿದೆ.

ಘಟನೆಯಲ್ಲಿ ಒಟ್ಟು 9 ಮಂದಿ ಸಿಲುಕಿಕೊಂಡಿದ್ದರು. ಎಲ್ಲರನ್ನೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಒಬ್ಬೊಬ್ಬರಾಗಿ ಇದುವರೆಗೆ 8 ಮಂದಿ ಸಾವಿಗೀಡಾಗಿದ್ದಾರೆ. ಇದೀಗ ಒಬ್ಬಾತನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ನಿನ್ನೆ ರಾತ್ರಿ ಮತ್ತೊಬ್ಬ ಮಾಲಾಧಾರಿ 27 ವರ್ಷದ ತೇಜೇಶ್ವರ್ ಸಾವನ್ನಪ್ಪಿದ್ದರು. ಇಂದು ಬೆಳಿಗ್ಗೆ 42 ವರ್ಷದ ಪ್ರಕಾಶ್ ಬಾರಕೇರ ಎಂಬವರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 8 ಕ್ಕೆ ಏರಿಕೆಯಾದಂತಾಗಿದೆ. ಪ್ರಕಾಶ್ ಹುಬ್ಬಳ್ಳಿಯ ಉಣಕಲ್ ನಿವಾಸಿಯಾಗಿದ್ದರು. ಇದರೊಂದಿಗೆ ಕುಟುಂಬಸ್ಥರ ಕಣ್ಣೀರ ಕಟ್ಟೆಯೊಡೆದಿದೆ.

ಹುಬ್ಬಳ್ಳಿಯ ಅಚ್ಚವ್ವನ ಕಾಲೊನಿಯ ಅಯ್ಯಪ್ಪ ಸನ್ನಿಧಿಯಲ್ಲಿ ಭೀಕರ ಸಿಲಿಂಡರ್ ಸ್ಪೋಟಗೊಂಡಿತ್ತು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಘಟನೆಯಲ್ಲಿ 9 ಮಂದಿ ಸುಟ್ಟು ಬೆಂದ ಸ್ಥಿತಿಯಲ್ಲಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಸೇರಿದ ಬಳಿಕ ಒಬ್ಬೊಬ್ಬರಾಗಿ ಸಾವನ್ನಪ್ಪುತ್ತಿರುವುದು ಕುಟುಂಬಸ್ಥರ ಧೃತಿಗೆಡಿಸಿದೆ. ಘಟನೆ ಬಳಿಕ ತೀವ್ರ ದುಃಖಗೊಂಡಿರುವ ಈ ಕುಟುಂಬಗಳು ದೇವರ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ನಿನ್ನೆ ರಾತ್ರಿ ಮೃತಪಟ್ಟಿದ್ದ ತೇಜೇಶ್ವರ್ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅಯ್ಯಪ್ಪ ಮಾಲೆ ಹಾಕುತ್ತಿದ್ದರು. ಇದೀಗ ಮಗನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರು ಆಸ್ಪತ್ರೆ ಬಳಿ ಬಂದು ಕಣ್ಣೀರ ಕೋಡಿ ಹರಿಸುತ್ತಿದ್ದಾರೆ. ಇಂದು ಪ್ರಕಾಶ ಬಾರಕೇರ ಮೃತಪಟ್ಟಿದ್ದು ಅವರ ಪುತ್ರನಿಗೆ ಚಿಕಿತ್ಸೆ ಮುಂದುವರಿದಿದೆ. ಅಯ್ಯಪ್ಪ ದಯೆ ತೋರಿಸಿ ಈತನಾದರೂ ಬದುಕುಳಿಯಲಿ ಎನ್ನುವುದು ಕುಟುಂಬಸ್ಥರ ಪ್ರಾರ್ಥನೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಂತ ಮನೆಯೇ ಇಲ್ಲ ಎನ್ನುವ ಸಿದ್ದರಾಮಯ್ಯಗೆ ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ನೋಡಿ