Publish Date: Sat, 11 May 2024 (10:27 IST)
Updated Date: Sat, 11 May 2024 (10:43 IST)
ಬೆಂಗಳೂರು: ಮಾವಿನ ಹಣ್ಣಿನ ಸೀಸನ್ ಬಂದಿದ್ದು ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಥರ ಥರದ ಮಾವಿನ ಹಣ್ಣು ಕಂಡುಬರುತ್ತಿದೆ. ಆದರೆ ಕೆಲವೆಡೆ ರಾಸಾಯನಿಕಯುಕ್ತ ಮಾವಿನಹಣ್ಣು ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ರಾಸಾಯನಿಕಯುಕ್ತ ಮಾವಿನ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ಗಂಭೀರ ಆರೋಗ್ಯ ಸಮಸ್ಯೆಯಾಗಬಹುದು. ಮಾವಿನ ಹಣ್ಣು ತುಂಬಾ ಸಮಯ ಹಾಳಾಗದಂತೆ ಇಡಲು, ಬೇಗನೇ ಹಣ್ಣಾಗಲು, ಹೊಳಪು ಮೂಡುವಂತೆ ಮಾಡಲು ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಆದರೆ ಈ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರಕ.
ನಾವು ಖರೀದಿಸುವ ಹಣ್ಣು ರಾಸಾಯನಿಕ ಮಿಶ್ರಿತವಾಗಿದೆಯೇ ಎಂದು ತಿಳಿಯಲು ಕೆಲವೊಂದು ವಿಧಾನಗಳಿವೆ. ಅವುಗಳು ಯಾವುವು ನೋಡೋಣ.
-
ರಾಸಾಯನಿಕ ಮಿಶ್ರಿತ ಹಣ್ಣುಗಳ ಗಾತ್ರ ಚಿಕ್ಕದಾಗಿರುತ್ತದೆ. ಸಹಜವಾಗಿ ಹಣ್ಣಾದರೆ ಅದು ಬಲಿತಿರುತ್ತದೆ ಮತ್ತು ಗಾತ್ರದಲ್ಲೂ ದೊಡ್ಡದಾಗಿರುತ್ತದೆ.
-
ಮಾವಿನ ಹಣ್ಣನ್ನು ಮಾರುಕಟ್ಟೆಯಿಂದ ತಂದ ತಕ್ಷಣ ನೀರು ಹಾಕಿದ ಒಂದು ಪಾತ್ರೆಗೆ ಹಾಕಿ. ಒಂದು ವೇಳೆ ಅದು ತೇಲುತ್ತಿದ್ದರೆ ಅದಕ್ಕೆ ರಾಸಾಯನಿಕ ಮಿಶ್ರಿತವಾಗಿದೆ ಎಂದು ಅರ್ಥ.
-
ರಾಸಾನಿಯಕ ಮಿಶ್ರಿತ ಹಣ್ಣಿನ ಹೊರಾವರಣದಲ್ಲಿ ಬಿಳಿ ಬಣ್ಣದ ಕೋಟಿಂಗ್ ಕಂಡುಬರುತ್ತದೆ. ಆದರೆ ನಾರ್ಮಲ್ ಆಗಿ ಹಣ್ಣಾದ ಮಾವಿನ ಹೊರಾವರಣ ಹಸಿರಾಗಿರುತ್ತದೆ
-
ರಾಸಾಯನಿಕ ಮಿಶ್ರಿತವಾಗಿದ್ದರೆ ಮಾವಿನ ಹಣ್ಣು ಚೂರು ಬಾಯಿಗಿಟ್ಟಾಗ ನಾಲಿಗೆ ಕೊಂಚ ಸುಟ್ಟ ಅನುಭವವಾಗಬಹುದು.