Select Your Language

Notifications

webdunia
webdunia
webdunia
Friday, 21 February 2025
webdunia

ಬಿಬಿಎಂಪಿಗೆ ಬೆಂಗಳೂರಲ್ಲಿ ಇನ್ನೆಷ್ಟು ಬಲಿ ಬೇಕು?

ಬಿಬಿಎಂಪಿಗೆ ಬೆಂಗಳೂರಲ್ಲಿ ಇನ್ನೆಷ್ಟು ಬಲಿ ಬೇಕು?
bangalore , ಶನಿವಾರ, 5 ನವೆಂಬರ್ 2022 (19:00 IST)
ಬೆಂಗಳೂರಿನಲ್ಲಿ ನಿಲ್ಲದ ಗುಂಡಿ, ಗಂಡಾಂತರ.ದಿನಕ್ಕೊಂದರಂತೆ ವಾಹನಸವಾರರ ಪ್ರಾಣ ಹೋಗ್ತಿದ್ರು ಬಿಬಿಎಂಪಿ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.ಇಂದು ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರ ಕೋಮಾ ಸೇರಿದಾನೆ.
 
ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಕೋಮದಲ್ಲಿ ಸಾವು ಬದುಕಿನ ಮಧ್ಯೆ ವ್ಯಕ್ತಿ ಹೋರಾಟ ನಡೆಸ್ತಿದ್ದಾನೆ.ಜಾಲಹಳ್ಳಿಯ ಗಂಗಮ್ಮ ಸರ್ಕಲ್ ಬಳಿ ಗುಂಡಿಗೆ ಬಿದ್ದು ಸಾವು ಬದುಕಿನ ನಡುವೆ ಸಂದೀಪ್ ಎಂಬಾತ ಹೋರಾಟ ನಡೆಸ್ತಿದ್ದಾನೆ.ವಿದ್ಯಾರಣ್ಯಪುರದ ನಿವಾಸಿಯಾಗಿರುವ 37 ವರ್ಷದ ಸಂದೀಪ್ ಗುಂಡಿಗೆ ಬಿದ್ದು ತಲೆಗೆ ತೀವ್ರವಾದ ಗಾಯವಾಗಿರುವ ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಮಂಗಳವಾರ ರಾತ್ರಿ 9.30  ಸ್ನೇಹಿತರ ಜೊತೆ ಕ್ರಿಕೆಟ್ ಆಟ ಮುಗಿಸಿ ಮನೆಗೆ ತೆರಳುತ್ತಿದ್ರು.ರಸ್ತೆಯಲ್ಲಿದ್ದ ಯಮಸ್ವರೂಪಿ ಗುಂಡಿ ಕಾಣಿಸದೇ ಗುಂಡಿಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಗಾಯವಾಗಿದೆ.ವ್ಯಕ್ತಿಯನ್ನ ತಕ್ಷಣ ಹೆಚ್.ಎಮ್.ಟಿ. ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದಾರೆ.ಆದ್ರೆ ಹೆಚ್.ಎಂ.ಟಿ.ಆಸ್ಪತ್ರೆಯಲ್ಲಿ  ಚಿಕಿತ್ಸೆ ನೀಡಲು ಸಿಬ್ಬಂದಿಗಳು ನಿರಾಕರಿಸಿದರಿಂದ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.ತಲೆಗೆ ತೀವ್ರವಾಗಿ ಗಾಯವಾದರಿಂದ ವ್ಯಕ್ತಿಗೆ ಆಪರೇಷನ್ ಮಾಡಿ ಕೋಮಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈಗಬಸಂದೀಪ್ ಕೋಮದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪಲ್ಲಂಗಕ್ಕೆ ಕರೆದಳು ಹನಿಟ್ರ್ಯಾಪ್ ರಾಣಿ..!