Select Your Language

Notifications

webdunia
webdunia
webdunia
webdunia

ಒಬ್ಬ ಕುಡುಕ ಎಷ್ಟು ಕ್ವಾಟರ್ ಎಣ್ಣೆ ಖರೀದಿಸಬಹುದು?

ಒಬ್ಬ ಕುಡುಕ ಎಷ್ಟು ಕ್ವಾಟರ್ ಎಣ್ಣೆ ಖರೀದಿಸಬಹುದು?
ಬೆಂಗಳೂರು , ಭಾನುವಾರ, 3 ಮೇ 2020 (17:10 IST)
ಲಾಕ್ ಡೌನ್ ಸಡಿಲಿಕೆಯಿಂದ ಮದ್ಯದ ಅಂಗಡಿಗಳು ಬಹುತೇಕ ಪ್ರದೇಶಗಳಲ್ಲಿ ಓಪನ್ ಆಗುತ್ತಿವೆ.

ಒಂದುವರೆ ತಿಂಗಳಿಂದ ಗಂಟಲಿಗೆ ಎಣ್ಣೆ ಬಿದ್ದಿಲ್ಲ. ಹಿಂದಿನ ಅಷ್ಟೂ ದಿನಗಳ ಎಣ್ಣೆಯನ್ನು ಒಮ್ಮೇಲೆ ಖರೀದಿಸಿ ಬಾಯಿಗೆ ಸುರಿದುಕೊಳ್ಳೋಕೆ ಮುಂದಾಗಲಿದ್ದ ಕೆಲವು ಕುಡಕರ ಆಸೆಗೆ ಸರಕಾರ ತಣ್ಣೀರು ಎರಚಿದೆ.

ಕೊರೊನಾ ವೈರಸ್ ಆತಂಕ ಹೆಚ್ಚಿರುವ ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಎಣ್ಣೆ ಸಿಗೋದಿಲ್ಲ. ಈ ಪ್ರದೇಶದಲ್ಲಿ ನಿಮ್ಮ ಮನೆ ಇದ್ದರೆ ನೀವು ಕುಡಿಯೋ ಆಸೆಯನ್ನು ಇನ್ನೊಂದಿಷ್ಟು ದಿನ ಕೈಬಿಡಿ.

ಇನ್ನು, ಪ್ರತಿ ಕುಡುಕನಿಗೆ 4 ಬೀರ್ ಬಾಟಲ್ ಇಲ್ಲವೇ 6 ಪಿಂಟ್ ಬಾಟಲ್ ಗಳನ್ನು ಮಾತ್ರ ಖರೀದಿಸೋಕೆ ಅವಕಾಶ ಇದೆ. ಕ್ವಾಟರ್ ಕುಡಿಯೋ ಗ್ರಾಹಕನಿಗೆ 6 ಕ್ವಾಟರ್ ಮದ್ಯ ಖರೀದಿಗೆ ಸಿಗಲಿದೆ.

ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಒಂದಷ್ಟು ನಿಯಮಗಳನ್ನು ಎಣ್ಣೆ ಕೊಳ್ಳೋರು ಹಾಗೂ ಎಣ್ಣೆ ಮಾರಾಟ ಮಾಡುವವರು ಪಾಲಿಸಲೇಬೇಕಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಸರಕಾರಿ ಕಚೇರಿಗಳು ಫುಲ್ ಓಪನ್