Publish Date: Fri, 08 May 2026 (16:56 IST)
Updated Date: Fri, 08 May 2026 (16:59 IST)
ಕೇರಳದ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ಭಾರೀ ಸದ್ದು ಮಾಡುತ್ತಿರುವ ನಡುವೆ ಕೆಸಿ ವೇಣುಗೋಪಾಲ್ ಅವರು ಹೆಸರು ಮುನ್ನೆಲೆಗೆ ಬರುತ್ತಿದೆ.
2026ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಭರ್ಜರಿ ಜಯಗಳಿಸಿದ ನಂತರ, ಪಕ್ಷದ ಹೈಕಮಾಂಡ್ ಭಾನುವಾರದೊಳಗೆ ತನ್ನ ಮುಖ್ಯಮಂತ್ರಿ ಆಯ್ಕೆಯನ್ನು ಅಂತಿಮಗೊಳಿಸುವ ನಿರೀಕ್ಷೆಯಲ್ಲಿದೆ. ಪಕ್ಷದ ಶಾಸಕರಾದ ವಿಡಿ ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಪ್ರಬಲ ಸ್ಪರ್ಧಿಗಳಾಗಿದ್ದರೂ, ಕೆಸಿ ವೇಣುಗೋಪಾಲ್ ಅವರ ಹೆಸರು ಮಾತ್ರ ಮುಂಚೂಣಿಯಲ್ಲಿದೆ.
ಎಐಸಿಸಿ ವೀಕ್ಷಕರೊಂದಿಗಿನ ಚರ್ಚೆಯ ಸಮಯದಲ್ಲಿ ಹೊಸದಾಗಿ ಆಯ್ಕೆಯಾದ ಬಹುಪಾಲು ಶಾಸಕರು ಅವರನ್ನು ಬೆಂಬಲಿಸಿರಬಹುದು ಎಂದು ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ ಹೊಸದಾಗಿ ಆಯ್ಕೆಯಾದ 63 ಕಾಂಗ್ರೆಸ್ ಶಾಸಕರ ಪೈಕಿ 43 ಮಂದಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ವೇಣುಗೋಪಾಲ್ ಅವರನ್ನು ಉನ್ನತ ಹುದ್ದೆಗೆ ಬೆಂಬಲಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಶಿಫಾರಸು ಮಾಡಿದ ಕಥೆಗಳು
ಕೆ ಸಿ ವೇಣುಗೋಪಾಲ್ ಯಾರು:
ಕೇರಳದ ಹೊರಗಿನ ಅನೇಕರಿಗೆ, ವೇಣುಗೋಪಾಲ್ ಅವರು ಕಾಂಗ್ರೆಸ್ ಹೈಕಮಾಂಡ್‌ನ ಅತ್ಯಂತ ಶಕ್ತಿಶಾಲಿ ಸಂಘಟನಾ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ರಾಹುಲ್ ಗಾಂಧಿಯವರ ಆಪ್ತ ಸಹಾಯಕರು ಎಂದು ಹೇಳಲಾಗಿದೆ. ಕೇರಳದ ರಾಜಕೀಯದಲ್ಲಿ ಇವರ ಪಾಯತ್ರ ತುಂಬಾನೇ ಪ್ರಮುಖವಾಗಿದ್ದು, ಪಕ್ಷದಲ್ಲಿ ಚುನಾವಣಾ ಅನುಭವ, ದೆಹಲಿ-ಮಟ್ಟದ ಪ್ರಭಾವ ಇವರಿಗೆ ಭಾರೀ ಇದೆ.
1963ರಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಜನಿಸಿದ ಕೆ.ಸಿ.ವೇಣುಗೋಪಾಲ್ ವಿದ್ಯಾರ್ಥಿ ಚಳವಳಿಯ ಮೂಲಕ ರಾಜಕೀಯ ಪಯಣ ಆರಂಭಿಸಿದ್ದರು. ಕೇರಳದ ಅನೇಕ ಕಾಂಗ್ರೆಸ್ ನಾಯಕರಂತೆ, ಅವರು ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್‌ಯು) ಮತ್ತು ನಂತರ ಯುವ ಕಾಂಗ್ರೆಸ್‌ನ ಶ್ರೇಣಿಯ ಮೂಲಕ ಏರಿದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ