Publish Date: Thu, 09 Apr 2026 (10:08 IST)
Updated Date: Thu, 09 Apr 2026 (10:11 IST)
ಬೆಂಗಳೂರು: ಇಂದು ಕೇರಳ, ಪುದುಚೇರಿ ಮತ್ತು ಅಸ್ಸಾಂ ವಿಧಾನಸಭೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಬೆಳಿಗ್ಗೆ 9 ಗಂಟೆಯ ವೇಳೆಗೆ ಎಷ್ಟು ವೋಟ್ ಆಗಿದೆ ಇಲ್ಲಿದೆ ವರದಿ.
ಕೇರಳದಲ್ಲಿ ಈ ಬಾರಿ ಯುಡಿಎಫ್ ಮತ್ತು ಎಲ್ ಡಿಎಫ್ ಜೊತೆಗೆ ಬಿಜೆಪಿ ಕೂಡಾ ಕೆಲವು ಕ್ಷೇತ್ರಗಳಲ್ಲಿ ಫೈಟ್ ಕೊಡುತ್ತಿದೆ. ಕಾಸರಗೋಡಿನ ಮಂಜೇಶ್ವರ, ತಿರುವನಂತಪುರಂಗಳಲ್ಲಿ ಬಿಜೆಪಿಯೂ ಗೆಲ್ಲುವ ವಿಶ್ವಾಸದಲ್ಲಿದೆ. ಇಲ್ಲಿ ಬೆಳಿಗ್ಗೆಯೇ ಜನ ಮತದಾನ ಮಾಡಲು ಬಂದಿದ್ದು 9 ಗಂಟೆಯವರೆಗಿನ ವರದಿ ಪ್ರಕಾರ ಶೇ.16.23 ವೋಟಿಂಗ್ ಆಗಿರುವುದಾಗಿ ವರದಿಯಾಗಿದೆ.
ಇನ್ನು ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಗದ್ದುಗೆ ಪಡೆಯುವ ವಿಶ್ವಾಸದಲ್ಲಿದೆ. ಇಲ್ಲಿದೆ ಹಿಮಾಂತ ಬಿಸ್ವಾ ಶರ್ಮಾ ನಾಯಕತ್ವ ಗಟ್ಟಿಯಾಗಿದೆ. ಹಾಗಿದ್ದರೂ ಕಳೆದ ಬಾರಿ ಕಾಂಗ್ರೆಸ್ ಕೂಡಾ 50 ಸ್ಥಾನ ಗೆದ್ದುಕೊಂಡಿತ್ತು. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿಯಿದೆ. ಇಲ್ಲಿ ಬೆಳಿಗ್ಗೆ 9 ಗಂಟೆಯವರೆಗಿನ ವರದಿ ಪ್ರಕಾರ 17.41 ಶೇ. ವೋಟಿಂಗ್ ನಡೆದಿದೆ.
ಇನ್ನು, ಪುದುಚೇರಿಯಲ್ಲಿ ಆಡಳಿತಾರೂಢ ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ ನಾಯಕ, ಸಿಎಂ ರಂಗಸ್ವಾಮಿ ಮತ್ತೊಮ್ಮೆ ಅಧಿಕಾರಪ ಪಡೆಯುವ ವಿಶ್ವಾಸದಲ್ಲಿದ್ದಾರೆ. ಬೆಳಿಗ್ಗೆಯೇ ಅವರು ಮತದಾನ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ. ಇಲ್ಲಿ ಬೆಳಿಗ್ಗೆ 9 ಗಂಟೆಯವರೆಗಿನ ಅವಧಿಯಲ್ಲಿ ಶೇ.17.87 ಮತದಾನ ನಡೆದಿದೆ.