Select Your Language

Notifications

webdunia
webdunia
webdunia
webdunia

ಹೆಂಡತಿ ಸತ್ತ ಬಳಿಕ ಮರು ಮದುವೆಗೆ ಎಷ್ಟು ಸಮಯ ಬೇಕು: ಗೂಗಲ್‌ನಲ್ಲಿ ಸರ್ಚ್‌ ಮಾಡಿ ಸಿಕ್ಕಿಬಿದ್ದ ಪತಿ

Naresh Bhatt

Sampriya

ಅಮೆರಿಕ , ಬುಧವಾರ, 4 ಡಿಸೆಂಬರ್ 2024 (18:02 IST)
Photo Courtesy X
ಅಮೆರಿಕ: ಹೆಂಡತಿ ಸತ್ತ ಬಳಿಕ ಎಷ್ಟು ಸಮಯದ ನಂತರ ಮರು ಮದುವೆಯಾಗಬಹುದು ಎಂದು ಗೂಗಲ್‌ನಲ್ಲಿ ಸರ್ಜ್ ಮಾಡುವ ಮೂಲಕ ಕೊಲೆ ಆರೋಪಿಯಾಗಿರುವ ಪತಿ ನಾಲ್ಕು ತಿಂಗಳ ಬಳಿಕ ಪೊಲೀಸರ ಅತಿಥಿಯಾಗಿದ್ದಾನೆ.

ವರ್ಜಿನಿಯಾ ನಿವಾಸಿಯಾಗಿದ್ದ ನರೇಶ್ ಭಟ್ ವಿರುದ್ಧ ಪತ್ನಿಯನ್ನು ಕೊಲೆ ಮಾಡಿದ ಆರೋಪ ದಾಖಲಾಗಿದೆ. ಇದಕ್ಕೆಲ್ಲ ಕಾರಣ ಆತ ಗೂಗಲ್‌ನಲ್ಲಿ ಸರ್ಜ್ ಮಾಡಿದ ವಿಚಾರ.

ಮೂರು ತಿಂಗಳ ಹಿಂದೆ ನರೇಶ್ ಭಟ್ ಪತ್ನಿ ಮುಮ್ತಾ ಭಟ್ ನಾಪತ್ತೆಯಾಗಿದ್ದಾರೆ.  ಪತ್ನಿ ನಾಪತ್ತೆ ಬಳಿಕ ನರೇಶ್‌ ಗೂಗಲ್‌ನಲ್ಲಿ ಹೆಂಡತಿ ಸತ್ತ ಬಳಿಕ ಮರು ಮದುವೆ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಎಂದು ಸರ್ಚ್ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ. ಇನ್ನೂ ತನಿಖೆಯಲ್ಲಿ ಮನೆಯಲ್ಲಿ ಕಂಡುಬಂದ ರಕ್ತದ ಕಲೆಗಳು ಪ್ರಬಲ ಸಾಕ್ಷಿಯಾಗಿ ದೊರೆತಿದೆ. ಇದೀಗ ಪತ್ನಿಯನ್ನು ನರೇಶ್‌ ಕೊಲೆ ಮಾಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ.

ಇಷ್ಟಾದರೂ ಪತ್ನಿ ಮಮತಾ ಭಟ್ ಅವರ ದೇಹ ಸಿಕ್ಕಿಲ್ಲ. ಆದ್ರೆ ಅವರ ಡಿಎನ್ ಎ ಹಾಗೂ, ಮನೆಯಲ್ಲಿದ್ದ ಪತ್ತೆಯಾದ ರಕ್ತದ ಕಲೆಗೆ ಹೋಲಿಕೆಯಾಗಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. 37 ವರ್ಷದ ನರೇಶ್ ವಿರುದ್ಧ ಪ್ರಿನ್ಸ್ ವಿಲಿಯಮ್ ಕೋರ್ಟ್ ಮುಖ್ಯ ನಾಯಾಧೀಶರು ಕೊಲೆ ಹಾಗೂ ಮೃತದೇಹದ ನಾಪತ್ತೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ.

ಮಮ್ತಾ ಭಟ್  ಅವರು ನೇಪಾಳದ ಮಕ್ಕಳ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಈ ಘಟನೆ ಈಗ ಅಂತರಾಷ್ಟ್ರೀಯ ಗಮನ ಸೆಳೆದಿದೆ. ಮಮ್ತಾ ಭಟ್ ಕುಟುಂಬಸ್ಥರು ಹಾಗೂ ಅವರ ಸಮುದಾಯ ಸಾಮಾಜಿಕ ಜಾಲತಾಣದ ಮೂಲಕ ಹಾಗೂ ರ್ಯಾಲಿ ಮೂಲಕ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

BJP Waqf protest: ರೈತರು, ಹಿಂದೂಗಳ ಮೇಲೆ ಸಿಎಂಗೆ ಸಿಟ್ಟೇಕೆ?: ವಿಜಯೇಂದ್ರ