Publish Date: Sat, 11 Apr 2020 (17:25 IST)
Updated Date: Sat, 11 Apr 2020 (17:33 IST)
ಬಾರ್ ವೊಂದರಲ್ಲಿ ಮದ್ಯ ಕಳ್ಳತನ ಮಾಡಿದ್ದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.
ಬಾವಿಗೆ ಬಿದ್ದು ಹೊಸಕೋಟೆ ನಡುವತ್ತಿಯ ಮುನಿಪಿಳ್ಳಪ್ಪಾ ಸಾವು ಕಂಡಿದ್ದಾನೆ. ಬಾರ್ ವೊಂದರಲ್ಲಿ ಮದ್ಯ ಕಳ್ಳತನ ಮಾಡಿದ್ದ ಆರೋಪ ಈತನ ಮೇಲಿತ್ತು.
ಪೊಲೀಸರು ತನಿಖೆಗೆ ಅಂತ ಕರೆದುಕೊಂಡು ಹೋದಾಗ ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ
ಮುನಿಪಿಳ್ಳಪ್ಪಾನನ್ನು ಥಳಿಸಿದ್ದರಿಂದಲೇ ಆತ ಸಾವನ್ನಪ್ಪಿದ್ದಾನೆ.
ಕೇಸ್ ಮುಚ್ಚಲು ಪೊಲೀಸರು ಬಾವಿಗೆ ಬಿದ್ದಿದ್ದಾನೆ ಅಂತ ಸುಳ್ಳು ಕಥೆ ಕಟ್ಟುತ್ತಿದ್ದಾರೆ ಅಂತ ಮೃತನ ಸಂಬಂಧಿಕರು ಆರೋಪಿಸಿದ್ದಾರೆ.