Select Your Language

Notifications

webdunia
webdunia
webdunia
webdunia

ಕೊರೊನಾ ಮುಕ್ತವಾಗುತ್ತಾ ಈ ಜಿಲ್ಲೆ : ಡಿಸಿ ಖಡಕ್ ನಿರ್ಧಾರ

ಕೊರೊನಾ ಮುಕ್ತವಾಗುತ್ತಾ ಈ ಜಿಲ್ಲೆ : ಡಿಸಿ ಖಡಕ್ ನಿರ್ಧಾರ
ಹಾವೇರಿ , ಶನಿವಾರ, 11 ಏಪ್ರಿಲ್ 2020 (16:06 IST)
ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಈ ಡಿಸಿ ಪಣತೊಟ್ಟಿದ್ದಾರೆ.

ಹಾವೇರಿ ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಹೊರ ಜಿಲ್ಲೆಯಿಂದ ಹಾವೇರಿ ಜಿಲ್ಲೆಗೆ ಆಗಮಿಸಿದ ಎಲ್ಲ ನಾಗರಿಕರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು.

ಅವರು ಆಗಮಿಸಿದ ದಿನದಿಂದ 14 ದಿನಗಳವರೆಗೆ ಕಡ್ಡಾಯವಾಗಿ ಅವರ ಮನೆಯಲ್ಲಿ ಹೋಂ ಕ್ವಾರಂಟೈನಲ್ಲಿ ಇರಿಸಬೇಕು. ಅಂತಹ ನಾಗರಿಕರು ಒಂದು ವೇಳೆ ಹೋಂ ಕ್ವಾರಂಟೈನಲ್ಲಿ ಇರಲು ಒಪ್ಪದಿದ್ದಲ್ಲಿ ಅಥವಾ ಅನಾನೂಕೂಲತೆ ಇದ್ದಲ್ಲಿ ಅವರನ್ನು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ ಇರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೀಗಂತ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿ ಅವರು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಮನೆ ಮನೆ ಆರೋಗ್ಯ ಸಮೀಕ್ಷೆಯಲ್ಲಿ S.A.R.I / I.L.I ಲಕ್ಷಣಗಳು ಕಂಡು ಬಂದ ನಾಗರಿಕರಿಗೆ ಕೂಡಲೇ ಅಂತಹ ನಾಗರಿಕರನ್ನು ಪರೀಕ್ಷೆಗೆ ಒಳಪಡಿಸಬೇಕು. ಆ ಮೂಲಕ ಪ್ರತಿ ನಿತ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದೇಶದ 11 ರಾಜ್ಯಗಳಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣ; ರಾಜ್ಯಗಳ ಲಾಕ್ ಡೌನ್ ವಿಸ್ತರಣೆ ಖಚಿತ