Publish Date: Mon, 17 Dec 2018 (18:37 IST)
Updated Date: Mon, 17 Dec 2018 (18:40 IST)
ರಸ್ತೆ ದಾಟುತ್ತಿದ್ದ ಮಂಗನಿಗೆ ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮಂಗ ಸಾವು ಬದುಕಿನ ನಡುವೆ ಒದ್ದಾಡುತ್ತಿತ್ತು. ಸಾಯುತ್ತಿದ್ದ ಮಂಗನಿಗೆ ಸಾಯಮ್ಮ ನೆರವಾಗಿ ಮಾನವೀಯತೆ ಮೆರೆದಳು.
ಕಲಬುರಗಿ ನಗರದ ಆಳಂದ ಚೆಕ್‌ಪೋಸ್ಟ್ ಬಳಿ ಈ ಘಟನೆ ನಡೆದಿದೆ. ಕಾರು ಢಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಜೀವನ್ಮರಣದ ನಡುವೆ ಮಂಗ ಹೋರಾಟ ನಡೆಸುತ್ತಿತ್ತು.
ಆಗ ಸಾಯಮ್ಮ ಎಂಬ ಮಹಿಳೆಯು ಮಂಗನನ್ನು ತಕ್ಷಣ ಪಶು ಆಸ್ಪತ್ರೆಗೆ ದಾಖಲು ಮಾಡಿದರು.
ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಂಗನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಮಂಗನಿಗೆ ಢಿಕ್ಕಿ ಹೊಡೆದು ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ.