Select Your Language

Notifications

webdunia
webdunia
webdunia
webdunia

ಖತರ್ನಾಕ್ ಮಹಿಳೆಯರು ಚಿನ್ನದ ಸರ ಎಗರಿಸಿದ್ದು ಹೇಗೆ ಗೊತ್ತಾ?

ಖತರ್ನಾಕ್ ಮಹಿಳೆಯರು ಚಿನ್ನದ ಸರ ಎಗರಿಸಿದ್ದು ಹೇಗೆ ಗೊತ್ತಾ?
ಹಾಸನ , ಭಾನುವಾರ, 24 ಫೆಬ್ರವರಿ 2019 (14:08 IST)
ನಾಲ್ವರು ಕಿಲಾಡಿ ಮಹಿಳೆಯರು ಚಿನ್ನದ ಸರವನ್ನು ಕಳ್ಳತನ ಮಾಡಿ ಚಾಲಾಕಿತನ ಮೆರೆದಿದ್ದಾರೆ. ಆದರೆ ಆ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಹಿಳೆಯರಿಂದ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಹಾಸನದ ಚನ್ನರಾಯಪಟ್ಟಣ ದ ನಂದಿ ಜ್ಯೂವೆಲರ್ಸ್ ನಲ್ಲಿ
ಘಟನೆ ನಡೆದಿದೆ.

ಬಾಗೂರು ರಸ್ತೆಯಲ್ಲಿನ ನಂದಿ ಚಿನ್ನದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರಿಂದ ಚಿನ್ನ ಕಳ್ಳತನಮಾಡಲಾಗಿದೆ. ಸಿಸಿ ಕ್ಯಾಮೇರಾದಲ್ಲಿ ಕಳ್ಳಿಯರ ಕೈಚಳಕ  ಸೆರೆಯಾಗಿದೆ.

ಚಿನ್ನದ ಅಂಗಡಿ ಮಾಲೀಕ ಮಗನ ಗಮನ ಬೇರೆಡೆ ಸೆಳೆದು ಕಳವು ಮಾಡಲಾಗಿದೆ.
ಅಂಗಡಿ ಮಾಲೀಕ ಸೋಹನ್ ಲಾಲ್  ಮಧ್ಯಾಹ್ನ ಊಟಕ್ಕೆಂದು ತೆರಳಿದ್ದಾಗ ಘಟನೆ ನಡೆದಿದೆ.
ಅಂಗಡಿಯಲ್ಲಿದ್ದ ಅಂಗಡಿ ಮಾಲೀಕನ  16 ವರ್ಷದ ಮಗನ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಲಾಗಿದೆ.
ನಾಲ್ವರು ಮಹಿಳೆಯರಿಂದ ಕಳ್ಳತನ ನಡೆದಿದೆ.

ಹುಡುಗನನ್ನು ಒಡವೆ ತೋರಿಸುವಂತೆ ಕ್ಯಾಷ್ ಕೌಂಟರ್ನಿಂದ ಬೇರೆಡೆಗೆ ‌ಗಮನ ಸೆಳೆದಿರುವ  ಒಬ್ಬ ಮಹಿಳೆ,
ಒಡವೆ ನೋಡುವ ನೆಪದಲ್ಲಿ ಯುವಕನನ್ನು ಮೂವರು ಕಳ್ಳಿಯರು ಮರೆಮಾಚಿದ್ದಾರೆ. ಕೌಂಟರ್ ಬಳಿ  ಇನ್ನೊಬ್ಬ ಮಹಿಳೆ ಚಿನ್ನದ ಬಾಕ್ಸ್ ಗಳನ್ನು ಕಳ್ಳತನ ಮಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಈ ಕುರಿತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ್ ಜಿಂದಾಬಾದ್ ಎಂದ ಪಾಪಿಗೆ ಏನಾಯ್ತು ಗೊತ್ತಾ?