Select Your Language

Notifications

webdunia
webdunia
webdunia
webdunia

ಡಾಕ್ಟರ್ ದಂಪತಿ ಮನೆಯಲ್ಲಿ ಏನಾಗಿದೆ ಗೊತ್ತಾ?

ಡಾಕ್ಟರ್ ದಂಪತಿ ಮನೆಯಲ್ಲಿ ಏನಾಗಿದೆ ಗೊತ್ತಾ?
ಬೆಳಗಾವಿ , ಮಂಗಳವಾರ, 19 ಫೆಬ್ರವರಿ 2019 (16:07 IST)
ಪತಿ ಡಾಕ್ಟರ್. ಪತ್ನಿ ಕೂಡ ವೈದ್ಯೆ ಇವರ ಮನೆಯಲ್ಲಿ ದುಷ್ಕರ್ಮಿಗಳು ಕೈಚಳಕ ತೋರಿದ್ದಾರೆ.

ಡಾಕ್ಟರ್ ದಂಪತಿ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. 24 ಲಕ್ಷ  ರೂ. ಮೌಲ್ಯದ ಚಿನ್ನದ, ವಜ್ರದ ಆಭರಣಗಳನ್ನು ಕಳ್ಳತ‌ನ ಮಾಡಲಾಗಿದೆ.

ಬೆಳಗಾವಿಯ ರಾಣಿ ಚೆನ್ನಮ್ಮ ನಗರದ ಮನೆಯಲ್ಲಿ ಕಳ್ಳತನವಾಗಿದೆ. ಡಾಕ್ಟರ್ ರಾಜಶೇಖರ ಪಾಟೀಲ ಮನೆಗೆ ಕನ್ನ ಹಾಕಲಾಗಿದೆ. ರಾಜಶೇಖರ ಪಾಟೀಲ ದಂಪತಿಗಳಿಬ್ಬರು ವೈದ್ಯರಾಗಿದ್ದಾರೆ.

ವೈದ್ಯ ದಂಪತಿಗಳು ಫೆ.16 ಬೆಂಗಳೂರಿಗೆ ಹೋಗಿದ್ದರು. ಎರಡು ದಿನ ಮನೆಗೆ ಬೀಗ ಹಾಕಲಾಗಿತ್ತು. ನೆಲಮಹಡಿಯ ಬೆಡ್ ರೂಮ್ ಕಿಟಕಿ ಗ್ರೀಲ್ ಮುರಿದು ಕಳ್ಳತನ ಮಾಡಿದ್ದಾರೆ. ಊರಿನಿಂದ ಮರಳಿ ಬಂದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಸ್ಥಳಕ್ಕೆ ಉದ್ಯಮಬಾಗ ಪೊಲೀಸರು ಭೇಟಿ ನೀಡಿ ಪರಿಶೀಸಿ ತನಿಖೆ ಕೈಗೊಂಡಿದ್ದಾರೆ. ಬೆಳಗಾವಿಯ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಿ.ಟಿ.ರವಿ ಕಾರು ಅಪಘಾತ ಪ್ರಕರಣದ ಬಗ್ಗೆ ಬಿಜೆಪಿ ಹೇಳಿದ್ದೇನು ಗೊತ್ತಾ?