Publish Date: Mon, 17 Dec 2018 (19:12 IST)
Updated Date: Mon, 17 Dec 2018 (19:14 IST)
ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಾಳೆ.
ಆಟೊ ರಿಕ್ಷಾ ಮತ್ತು ಬಸ್ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಎಚ್.ಡಿ ಕೋಟೆಯ ಹೆಬ್ಬಲಗುಪ್ಪೆ ಬಳಿ ಸಂಭವಿಸಿದ ಅವಘಡ ಇದಾಗಿದೆ. ಎಚ್.ಡಿ ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ಗಾಯಾಳುಗಳನ್ನು ಸ್ಥಳಾಂತರ ಮಾಡಲಾಗಿದೆ.
ಗಾಯಾಳುಗಳಲ್ಲಿ ಗರ್ಭಿಣಿಯೊಬ್ಬರಿಗೂ ಗಂಭೀರ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ ಗಾಯಾಳುಗಳ ಆಕ್ರಂದನ.
ಅಪಘಾತಲ್ಲಿ ವಾಣಿ ಎಂಬಾಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಚ್‌ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.