Select Your Language

Notifications

webdunia
webdunia
webdunia
webdunia

ಮಧ್ಯಪ್ರದೇಶದಲ್ಲಿದ್ದ 19 ಮಕ್ಕಳು ರಾಜ್ಯಕ್ಕೆ ಹೇಗೆ ಬರ್ತಿದ್ದಾರೆ?

ಮಧ್ಯಪ್ರದೇಶದಲ್ಲಿದ್ದ 19 ಮಕ್ಕಳು ರಾಜ್ಯಕ್ಕೆ ಹೇಗೆ ಬರ್ತಿದ್ದಾರೆ?
ಕಾರವಾರ , ಶುಕ್ರವಾರ, 1 ಮೇ 2020 (16:57 IST)
ಲಾಕ್ ಡೌನ್ ನಿಂದಾಗಿ ತಿಂಗಳಿಗೂ ಹೆಚ್ಚು ಕಾಲ ಮಧ್ಯಪ್ರದೇಶದಲ್ಲಿ ಸಿಲುಕಿದ್ದ 19 ವಿದ್ಯಾರ್ಥಿಗಳು ರಾಜ್ಯದತ್ತ ಪಯಣ ಬೆಳೆಸಿದ್ದಾರೆ.

ಮಧ್ಯಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಉತ್ತರಕನ್ನಡ ಜಿಲ್ಲೆಯ 19 ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿಶೇಷ ಕಾಳಜಿಯಿಂದ ಮರಳಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ನವೋದಯ ಶಾಲೆಯ 19 ಜನ ವಿದ್ಯಾರ್ಥಿಗಳು ಮಧ್ಯಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ಜಿಲ್ಲಾ ಉಸ್ತುವಾರಿ ಹಾಗೂ ಸಕ್ಕರೆ ಮತ್ತು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್  ವಿಶೇಷ ಕಾಳಜಿವಹಿಸಿ ರಾಜ್ಯ ಸರಕಾರದೊಂದಿಗೆ ಹಾಗೂ ಮಧ್ಯಪ್ರದೇಶ ಸರಕಾರದ ಸಂಬಂಧಪಟ್ಟ ಅಧಿಕಾರಿಗಳ ಬಳಿ ಈ ಬಗ್ಗೆ ಮಾತನಾಡಿದರು.

ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕಳುಹಿಸುವಂತೆ ಮನವಿ ಮಾಡಿದರು. ಇದಕ್ಕೆ ತಕ್ಷಣ ಸ್ಪಂಧಿಸಿದ ಮಧ್ಯಪ್ರದೇಶ ಸರಕಾರವು ಎಲ್ಲಾ 19 ವಿದ್ಯಾರ್ಥಿಗಳನ್ನು ಕರ್ನಾಟಕಕ್ಕೆ  ಕಳುಹಿಸುವುದಾಗಿ ತಿಳಿಸಿತು. ಅಲ್ಲದೇ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿ ತವರಿಗೆ ಕಳುಹಿಸುವ ವ್ಯವಸ್ಥೆ  ಮಾಡಿತು.



Share this Story:

Follow Webdunia kannada

ಮುಂದಿನ ಸುದ್ದಿ

ಪುಣೆಯಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಬರುತ್ತಾರಾ?