ಬೆಂಗಳೂರು: ಲಾಕ್ ಡೌನ್ ನಿಂದಾಗಿ ಎಷ್ಟೋ ವಿದ್ಯಾಸಂಸ್ಥೆಗಳು ಆನ್ ಲೈನ್ ಶಿಕ್ಷಣದ ಮೊರೆ ಹೋಗಿವೆ. ದ್ವಿತೀಯ ಪಿಯುಸಿ, ಕೆಲವು ವೃತ್ತಿಪರ ಕಾಲೇಜುಗಳು ಈಗ ಆನ್ ಲೈನ್ ಶಿಕ್ಷಣ ಒದಗಿಸುತ್ತಿವೆ.
ನೇರವಾಗಿ ತರಗತಿಗೆ ಹಾಜರಾಗಲು ಕೊರೋನಾ ಭಯ. ಹೀಗಾಗಿ ಆಧುನಿಕ ತಂತ್ರಜ್ಞಾನದ ಲಾಭ ಪಡೆದು ಆನ್ ಲೈನ್ ಮೂಲಕ ಪಾಠಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿವೆ.
ಆದರೆ ಇದು ನಗರ ಭಾಗದ ವಿದ್ಯಾರ್ಥಿಗಳಿಗಷ್ಟೇ ಉಪಯೋಗವಾಗುತ್ತಿದೆ. ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಇದು ಇನ್ನೊಂದು ಸಮಸ್ಯೆ ತಂದಿಟ್ಟಿದೆ. ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸಿಗದೇ, ಆನ್ ಲೈನ್ ನಲ್ಲಿ ಪಾಠ ಕೇಳಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಇದಕ್ಕಾಗಿ ನೆಟ್ ಸಂಪರ್ಕ ಸಿಗುವ ಕಡೆಗೆ ನಡೆದಾಡುವ, ದಿನವಿಡೀ ಮನೆಯಿಂದ ಹೊರಗೆ ಕಳೆಯುವ ಪರಿಸ್ಥಿತಿ ಬರುತ್ತಿದೆ. ಹೀಗಾಗಿ ಶಿಕ್ಷಣ ಇಲಾಖೆಯೂ ಈ ವರ್ಷದ ಪಠ್ಯ ಕ್ರಮವನ್ನು ಕೊಂಚ ಕಡಿಮೆ ಮಾಡುವ, ಹಗುರಗೊಳಿಸುವ ಕೆಲಸ ಮಾಡಿದರೆ ವಿದ್ಯಾರ್ಥಿಗಳಿಗೆ ಉಪಯೋಗವಾಗಬಹುದು.