Publish Date: Tue, 14 Apr 2020 (18:31 IST)
Updated Date: Tue, 14 Apr 2020 (18:34 IST)
ಭಾರತ್ ಲಾಕ್ ಡೌನ್ ಹಿನ್ನಲೆಯಲ್ಲಿ ರಾಜ್ಯದ 23 ಮಕ್ಕಳು ಮಧ್ಯಪ್ರದೇಶದಲ್ಲಿ ಲಾಕ್ ಆಗಿದ್ದಾರೆ.
ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ನವೋದಯ ಶಾಲಾ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. 9 ನೇ ತರಗತಿಯ 11 ವಿದ್ಯಾರ್ಥಿನಿಯರು ಹಾಗೂ 12 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು23 ಮಕ್ಕಳು ಅಲ್ಲಿದ್ದಾರೆ.
ಒಂದು ವರ್ಷದ ಮೈಗ್ರೇಶನ್ ಕೋರ್ಸ್ ಗಾಗಿ ಮಧ್ಯಪ್ರದೇಶ ಇಂದೊರ್ ಗೆ ತೆರಳಿದ್ದ ಮಕ್ಕಳು ಇವರಾಗಿದ್ದು, ಇಂದೋರ್ ಸಮೀಪದ ದೇವಾಸ್ ಬಳಿಯ ನವೋದಯ ವಿದ್ಯಾಲಯದಲ್ಲಿದ್ದಾರೆ.
ಕೊರೊನಾ ವೈರಸ್ ಹರಡುತ್ತಿರೋ ಹಿನ್ನಲೆಯಲ್ಲಿ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಸ್ಯಾನಿಟೈಸರ್ ಬಸ್ ಮೂಲಕ ಮಕ್ಕಳನ್ನು ವಾಪಸ್ ಕಳಹಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಪೋಷಕರು ಮನವಿ ಮಾಡಿದ್ದಾರೆ.