Select Your Language

Notifications

webdunia
webdunia
webdunia
webdunia

ಮೇ 3ರವರೆಗೆ ಲಾಕ್ ಡೌನ್ ವಿಸ್ತರಣೆ- ಪ್ರಧಾನಿ ಮೋದಿ ಘೋಷಣೆ

ನವದೆಹಲಿ
ನವದಹಲಿ , ಮಂಗಳವಾರ, 14 ಏಪ್ರಿಲ್ 2020 (10:27 IST)
ನವದಹಲಿ : ಕೊರೊನಾ ಭೀತಿ ಹಿನ್ನಲೆಯಲ್ಲಿ ಮೇ 3ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡುವುದಾಗಿ ಇಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.


ಇಂದು ಮೊದಲ ಹಂತದ ಲಾಕ್ ಡೌನ್ ಕೊನೆಯ ದಿನವಾದ ಹಿನ್ನಲೆಯಲ್ಲಿ ಇಂದು ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹೊಸ ಭಾಗಗಳಿಗೆ ವೈರಸ್ ಹರಡದಂತೆ ನೋಡಿಕೊಳ್ಳಬೇಕು. ಎಲ್ಲರಿಂದಲೂ ಲಾಕ್ ಡೌನ್ ಮುಂದುವರಿಸುವ ಬೇಡಿಕೆ ಬಂದಿದೆ. ಆದ ಕಾರಣ ಇನ್ನು 19 ದಿನಗಳ ಕಾಲ ಲಾಕ್ ಡೌನ್ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.


ಅಲ್ಲದೇ ಕೊರೊನಾದಿಂದ ಪ್ರತಿ ಸಾವು ನಮ್ಮ ಚಿಂತೆಯನ್ನು ಹೆಚ್ಚಿಸುತ್ತದೆ. ಆದಕಾರಣ ಏ.20ರ ತನಕ ಲಾಕ್ ಡೌನ್ ಕಠಿಣವಾಗಿದ್ದು, ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಣ್ಣು ಇರಿಸಲಾಗುವುದು ಎಂಬುದಾಗಿ ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ನೆರವೇರಿತು ಟ್ವಿಟರಿಗರ ಒತ್ತಾಸೆ: ಪ್ರಧಾನಿ ಭಾಷಣಕ್ಕಾಗಿ ಕೆಲವು ನಿಮಿಷ ರಾಮಾಯಣ ಸ್ಥಗಿತ!