Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಎಷ್ಟು ಕಳಪೆ ಔಷಧಗಳಿವೆ ಗೊತ್ತಾ? ಸಚಿವರೇ ಬಾಯ್ಬಿಟ್ಟ ಸತ್ಯ

ರಾಜ್ಯದಲ್ಲಿ ಎಷ್ಟು ಕಳಪೆ ಔಷಧಗಳಿವೆ ಗೊತ್ತಾ? ಸಚಿವರೇ ಬಾಯ್ಬಿಟ್ಟ ಸತ್ಯ
ಚಿಕ್ಕಬಳ್ಳಾಪುರ , ಮಂಗಳವಾರ, 14 ಏಪ್ರಿಲ್ 2020 (17:52 IST)
ರಾಜ್ಯದಲ್ಲಿ ಕಳಪೆ ಔಷಧಗಳು ಇರೋದು ಬೆಳಕಿಗೆ ಬಂದಿದೆ ಎಂದು ಕೃಷಿ ಸಚಿವ ಹೇಳಿದ್ದಾರೆ.

ರಾಜ್ಯದಲ್ಲಿ ಕೃಷಿಗೆ ಬಳಸುವ ಔಷಧಗಳ ಪೈಕಿ ಸುಮಾರು 175 ಮಾದರಿಗಳು ಕಳಪೆ ಇರುವುದು ಬೆಳಕಿಗೆ ಬಂದಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಬಹಿರಂಗ ಪಡಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೃಷಿಗೆ ಬಳಸುವ ಔಷಧಗಳು ಪರಿಣಾಮವಾಗಿಲ್ಲ. ಬಹಳಷ್ಟು ಕಳಪೆ ಆಗಿವೆ ಎಂಬ ರೈತರಿಂದ ಬಂದ ದೂರಿನ ಹಿನ್ನಲೆಯಲ್ಲಿ ಕೃಷಿ ಇಲಾಖೆ ಸುಮಾರು 370 ಔಷಧ ಮಾದರಿಗಳನ್ನು ಪರೀಕ್ಷಿಸಿದಾಗ ಅದರಲ್ಲಿ 175 ಔಷಧಗಳು ಕಳಪೆ ಆಗಿವೆ ಎಂದು ಕೃಷಿ‌ ಸಚಿವರು ಬಹಿರಂಗಪಡಿಸಿದರು. ಈಗಾಗಲೇ ಅವರ ವಿರುದ್ಧ ದೂರು ದಾಖಲಾಗಿದೆ ಎಂದರು. ರೈತರಿಗೆ ಯಾರೇ ವಂಚನೆ‌ ಅಥವಾ ಮೋಸ ಮಾಡಿದರೆ‌ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದರು.

ಲಾಕ್ ಡೌನ್ ನಿಂದ ಎಲ್ಲರಿಗಿಂತ ರೈತರಿಗೆ ಹೆಚ್ವು ಪೆಟ್ಟು ಬಿದ್ದಿದೆ. ಆದ್ದರಿಂದ ಕೃಷಿ ವಲಯಕ್ಕೆ‌‌ ಸಂಬಂಧಿಸಿ ಎಲ್ಲಾ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದೆ. ಲಾಕ್ ಡೌನ್ ನ್ನು ದುರ್ಬಳಕೆ ಮಾಡಿಕೊಂಡು ರೈತರಿಗೆ ಮೋಸ, ವಂಚನೆ ಮಾಡುವ ದಲ್ಲಾಳಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ವಹಿಸಲಿದೆ ಎಂದು‌ ಎಚ್ಚರಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಲಕ್ಷ ಕೊರೊನಾ ರೋಗಿಗಳಿಗೆ ಇದು ಇದೆ ಎಂದ ಬಿ.ಶ್ರೀರಾಮುಲು