Select Your Language

Notifications

webdunia
webdunia
webdunia
webdunia

ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಆಗ್ತಿದ್ದಾರೆ ಎಂದ ಆರೋಗ್ಯ ಸಚಿವ

ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಆಗ್ತಿದ್ದಾರೆ ಎಂದ ಆರೋಗ್ಯ ಸಚಿವ
ಬೆಳಗಾವಿ , ಶನಿವಾರ, 21 ಮಾರ್ಚ್ 2020 (15:59 IST)
ರಾಜ್ಯದಲ್ಲಿ ಇನ್ನೊಬ್ಬರಲ್ಲಿ ಕೊರೊನಾ ಸೋಂಕಿತರಾಗಿರುವುದು ಪತ್ತೆಯಾಗಿದ್ದು, ಒಟ್ಟು 16 ಜನರು ಕೊರೊನೊ ವೈರಾಣುವಿಗೆ ಒಳಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಇವರಲ್ಲಿ ಐವರಲ್ಲಿ ಗುಣಮುಖರಾಗಿದ್ದು, ಮೂವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮಲು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಣಕ್ಕೆ ಜರ್ಮನ ದೇಶದ ವೈದ್ಯರು ಔಷಧಿ ಕಂಡುಕೊಂಡಿದ್ದು, ಔಷಧಿ ಕಂಡುಹಿಡಿದವರಲ್ಲಿ ಕರ್ನಾಟಕದ ವೈದ್ಯರೋರ್ವರು ಇದ್ದಾರೆ. ಔಷಧಿ ಕಂಡುಕೊಂಡಿದ್ದಾರೆಂದು ವೈರಾಣು ಬಗ್ಗೆ ನಿಷ್ಕಾಳಜಿ ಬೇಡ. ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲನೆ ಮಾಡುವುದು ತುಂಬಾ ಅಗತ್ಯ.  ಜನತಾ ಕರ್ಫ್ಯೂಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವುದನ್ನು ನಾವೆಲ್ಲರೂ ಪಾಲಿಸೋಣ ಎಂದರು.Share this Story:

Follow Webdunia kannada

ಮುಂದಿನ ಸುದ್ದಿ

ಆ ಸುಖ ಸರಿಯಾಗ ಸಿಗದಿದ್ದರೆ ಏನು ಮಾಡೋದು?