Select Your Language

Notifications

webdunia
webdunia
webdunia
webdunia

ಪ್ರಿಯಕರನಿಗೆ ಕಾಮಸುಖ ನೀಡುತ್ತಿದ್ದ ಗೃಹಿಣಿ : ಗಂಡ, ಮಗನಿಂದ ಡಬಲ್ ಮರ್ಡರ್

ಪ್ರಿಯಕರನಿಗೆ ಕಾಮಸುಖ ನೀಡುತ್ತಿದ್ದ ಗೃಹಿಣಿ : ಗಂಡ, ಮಗನಿಂದ ಡಬಲ್ ಮರ್ಡರ್
ವಿಜಯಪುರ , ಬುಧವಾರ, 22 ಜುಲೈ 2020 (17:44 IST)
ವಿವಾಹಿತೆಯೊಂದಿಗೆ ಯುವಕನೊಬ್ಬ ನಗ್ನವಾಗಿ ಸಂಬಂಧ ಬೆಳೆಸಿದ್ದ ಸ್ಥಿತಿಯಲ್ಲಿಯೇ ಆಕೆಯ ಗಂಡ, ಮಗ ನೋಡಿದ್ದಾರೆ.

ವಿವಾಹಿತ ಮಹಿಳೆಯೊಂದಿಗೆ ಯುವಕ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದ ತೋಟದಲ್ಲಿ  ಡಬಲ್ ಮರ್ಡರ್ ನಡೆದಿದೆ.

ಮಹಿಳೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದ ವೇಳೆ ಸಿಕ್ಕ ಜೋಡಿಗೆ ಮಹಿಳೆಯ ಮಗ ಹಾಗೂ ಮಹಿಳೆಯ ಪತಿಯಿಂದಲೇ ಇಬ್ಬರ ಕೊಲೆ ನಡೆದಿದೆ‌.

25 ವರ್ಷದ ಅಮರನಾಥ ಸೊಲ್ಲಾಪುರ ಹಾಗೂ 35 ವರ್ಷದ ಸುನೀತಾ ತಳವಾರ ಕೊಲೆಗೀಡಾದವರು.

ತಡ ರಾತ್ರಿ ಸುನೀತಾ ಬಳಿಗೆ ಅಮರನಾಥ ಬಂದಿದ್ದ. ಇದನ್ನು ಕಂಡ ಸುನೀತಾ ತಂದೆ ಹಾಗೂ ಅಪ್ರಾಪ್ತ ವಯಸ್ಸಿನ ಮಗ ಕೊಡಲಿಯಿಂದ ಕೊಚ್ಚಿ ಸುನೀತಾ ಹಾಗೂ ಅಮರನಾಥನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಕೊಲೆ ಮಾಡಿದ ಆರೋಪದಡಿ ಕೊಲೆಯಾದ ಸುನೀತಾಳ ಅಪ್ರಾಪ್ತ ವಯಸ್ಸಿನ ಮಗ ಹಾಗೂ ಆಕೆಯ ತಂದೆ ರಾಮಗೊಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯಾಹ್ನ 3 ರ ಬಳಿಕ ಸಂಪೂರ್ಣ ಲಾಕ್ ಡೌನ್