Select Your Language

Notifications

webdunia
webdunia
webdunia
webdunia

ಮಧ್ಯಾಹ್ನ 3 ರ ಬಳಿಕ ಸಂಪೂರ್ಣ ಲಾಕ್ ಡೌನ್

ಮಧ್ಯಾಹ್ನ 3 ರ ಬಳಿಕ ಸಂಪೂರ್ಣ ಲಾಕ್ ಡೌನ್
ಹಾವೇರಿ , ಬುಧವಾರ, 22 ಜುಲೈ 2020 (17:27 IST)
ರಾಜ್ಯದಲ್ಲಿ ಇನ್ಮುಂದೆ ಲಾಕ್ ಡೌನ್ ಇರಲ್ಲ ಅಂತ ಖುದ್ದು ಸಿಎಂ ಹೇಳಿದ್ದಾರೆ. ಆದರೆ ಈ ಊರಲ್ಲಿ ಮಾತ್ರ ಅಘೋಷಿತ ಲಾಕ್ ಡೌನ್ ಜಾರಿಯಾಗುತ್ತಿದೆ.

ಹಾವೇರಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೋಂಕು ನಿಯಂತ್ರಿಸಲು ಬ್ಯಾಡಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮಧ್ಯಾಹ್ನ 3 ಗಂಟೆ ಬಳಿಕ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳ್ಳಲಿದೆ.

ಕೃಷಿ ಚಟುವಟಿಕೆ, ಔಷಧ ಮಳಿಗೆಗಳು, ಆಸ್ಪತ್ರೆ ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ. ಲಾಕ್ ಡೌನ್ ಅವಧಿಯಲ್ಲಿ ಅಂಗಡಿ ತೆರೆಯುವ, ವಿನಾಕಾರಣ ರಸ್ತೆಯಲ್ಲಿ ತಿರುಗಾಡುವ, ಮಾಸ್ಕ್ ಧರಿಸದೆ ಓಡಾಡುವವರಿಗೆ ದಂಡ ವಿಧಿಸುವಂತೆ ಪೊಲೀಸ್ ರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಮುಗಿದ ಬೆನ್ನಲ್ಲೇ ದೇವಾಲಯಗಳಿಗೆ ಭಕ್ತರ ದಂಡು