Webdunia - Bharat's app for daily news and videos

Install App

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ ಆರೋಪ

Webdunia
ಶನಿವಾರ, 25 ಫೆಬ್ರವರಿ 2023 (18:40 IST)
ಅವರದ್ದು ನಾಲ್ಕು ವರ್ಷದ ದಾಂಪತ್ಯ ಜೀವನ.ಪರಸ್ಪರ ಪ್ರೀತಿಸಿ ವಿವಾಹವಾಗಿದ್ರು.ಆದ್ರೆ ಪತ್ನಿ ಮನೆಯಿಂದ ವರದಕ್ಷಿಣೆ ತರುವಂತೆ ಪತಿ ಪಟ್ಟು ಹಿಡಿದಿದ್ದ.ಕುಟುಂಬಸ್ಥರೆಲ್ಲ ಸೇರಿ ಇನ್ನಿಲ್ಲದಂತೆ ಚಿತ್ರಹಿಂಸೆ ಕೊಡ್ತಿದ್ರಂತೆ.ಇದರಿಂದ ಮನನೊಂದ ಮಹಿಳೆ ನೇಣಿಗೆ ಕೊರಳೊಡ್ಡಿದ್ದಾಳೆ.ಏರಿಯಾ ಜನರೆಲ್ಲ ಸೇರಿದ್ದಾರೆ..ನ್ಯಾಯಕ್ಕಾಗಿ ಪಟ್ಟು ಹಿಡಿದಿದ್ದಾರೆ..ಹೆತ್ತ ಕರಳು ಕಣ್ಣೀರು ಹಾಕ್ತಿದ್ರೆ..ಜನರ ಆಕ್ರೋಶದ ಕಟ್ಟೆ ಒಡೆದಿದೆ.ಮಹಿಳೆಯರೆಲ್ಲ ಸೇರು ಸಾವಿಗೆ ಕಾರಣರಾದ ಪಾಪಿಗಳಿಗೆ ಹಿಡಿಶಾಪ‌ ಹಾಕ್ತಿದ್ದಾರೆ.

ಬೆಂಗಳೂರು ರೈಲ್ವೇ ನಿಲ್ದಾಣ ಸಮೀಪದಲ್ಲೇ ಇರೊ ಏರಿಯಾ‌.ಲಕ್ಷ್ಮಣ್ ಪುರಿಯ ಎರಡನೇ ಅಡ್ಡರಸ್ತೆ.ಇದೇ ಸ್ಲಂ ಒಂದರಲ್ಲಿರುವ ಸಣ್ಣ ಮನೆಯಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಹೀಗೆ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿರುವ ಗೃಹಿಣಿ ಹೆಸರು ಸೌಂದರ್ಯ.ಹೌದು ಸೌಂದರ್ಯ ಮತ್ತು ವಿಘ್ನೇಶ್ ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ರು.ಆದ್ರೆ ಮಕ್ಕಳಿರಲಿಲ್ಲ.ಜೊತೆಗೆ ವಿಘ್ನೇಶ್ ,ವಿಘ್ನೇಶ್ ತಾಯಿ ಇರ್ಚಮ್ಮ ಮತ್ತು ಸಂಬಂಧಿಕರಾದ ಯಳಿಲ್,ವಿಮಲಾ,ರೇವತಿ,ಶಿವು ಸೇರಿದಂತೆ ಹಲವರು ಕಿರುಕುಳ ಕೊಡ್ತಿದ್ರಂತೆ.ಇದೇ ಕಾರಣಕ್ಕೆ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಸ್ತಿದ್ದಾರೆ.

ವಿಪರ್ಯಾಸ ಅಂದ್ರೆ ಸೌಂದರ್ಯ ತಂದೆ ಕೆಲ ವರ್ಷದ ಹಿಂದೆ ಸಾವನ್ನಪ್ಪಿದ್ರು.ತಾಯಿಗೂ ಕ್ಯಾನ್ಸರ್ ಇದ್ದು ತಮಿಳುನಾಡಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದು ಚಿಕಿತ್ಸೆ ಪಡಿತಿದ್ದಾರೆ‌.ಆದರೆ ಇದೇ ರೀತಿ ವರದಕ್ಷಿಣೆ ತರುವಂತೆ ನಿನ್ನೆ ಕೂಡ ಮನೆಯಲ್ಲಿ ಗಲಾಟೆಯಾಗಿದೆ.ಸಂಬಂಧಿಕರೆಲ್ಲ ಸೇರಿ ಥಳಿಸಿದ್ದಾರಂತೆ.ಇದರಿಂದ ನೊಂದು ಗಂಡನ ಮನೆ ಪಕ್ಕದಲ್ಲೇ ಇದ್ದ ತನ್ನ ತವರು ಮನೆಗೆ ತೆರಳಿ ಸಂಜೆ 3.30 ಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಏರಿಯಾ ಜನ ಮತ್ತು ಕುಟುಂಬಸ್ಥರು ಪತಿ ಕುಟುಂಬಸ್ಥರೇ ಈ ಸಾವಿಗೆ ಕಾರಣ.ಅವರಿಗೆ ತಕ್ಕ‌ ಶಿಕ್ಷೆ ಆಗಲೇಬೇಕು ಅಂತಾ ಆಗ್ರಹಿಸಿದ್ದು,ಘಟನೆ ಸಂಬಂಧ ಶೇಶಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಅಲ್ದೆ ಸೌಂದರ್ಯ ಸಾವಿಗೆ ನ್ಯಾಯ ಸಿಗಬೇಕು ಅಂತ ಠಾಣೇ ಎದುರು ಮೃತ ದೇಹ ವಿಟ್ಟು ಪ್ರತಿಭಟನೆ ಕೂಡ ಮಾಡಿ. ಆರೋಪಿ ಗೆ ಸರಿಯಾದ ಶಿಕ್ಷೆ ಆಗಬೇಕು ಇನ್ಮುಂದೆ ಇಂತಹ ಪ್ರಕರಣಗಳು ಆಗದಂತೆ ತಡೆಯಬೇಕು ಎಂದು ಮನವಿ ಮಾಡಿಕೊಂಡ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ತಾಪ್ತೆ ಮೇಲೆ ನಿರಂತರ ರೇಪ್ ಮಾಡಿ, ಗರ್ಭಪಾತ: ಪುತ್ತೂರಿನ 7 ವರ್ಷಗಳ ಹಿಂದಿನ ಪ್ರಕರಣಕ್ಕೆ ತೀರ್ಪು ಪ್ರಕಟ

ಮತಗಳ್ಳತನ: ರಾಹುಲ್ ನೇತೃತ್ವದಲ್ಲಿ ಆ.5 ರಂದು ಪ್ರತಿಭಟನೆ, ಡಿಕೆ ಶಿವಕುಮಾರ್

ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆತಾಗಿ ನಟಿ ಖುಷ್ಬು ಸುಂದರ್‌ ಜವಾಬ್ದಾರಿ

ಆರಾಮಾಗಿ ನಡೆದುಕೊಂಡು ಹೋಗುತ್ತಿರುವಾಗಲೇ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಸೂಸೈಡ್‌, ಭಯಾನಕ ವಿಡಿಯೋ

ಅಕ್ಟೋಬರ್‌ನಲ್ಲಿ ಸಿಎಂ ಬದಲಾವಣೆ ಪಕ್ಕಾ, ಖರ್ಗೆ ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆ: ಆರ್‌ ಅಶೋಕ್‌

ಮುಂದಿನ ಸುದ್ದಿ
Show comments