Publish Date: Sat, 24 Nov 2018 (18:51 IST)
Updated Date: Sat, 24 Nov 2018 (18:54 IST)
ಹಾಡು ಹಗಲಲ್ಲಿಯೇ ಮನೆಯೊಂದರ ಬೀಗ ಮುರಿದು ಮನೆ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಎಕ್ಸ೦ಬಾ ಪಟ್ಟಣದಲ್ಲಿ ಈ ಕಳ್ಳತನ ನಡೆದಿದೆ. ಕೃಷ್ಣಾ ನಸಲಾಪೂರೆ ಎಂಬುವರಿಗೆ ಸೇರಿದ ಮನೆ ಕಳ್ಳತನ ಮಾಡಲಾಗಿದೆ.
ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಬೀಗ ಮುರಿದು ಕಳ್ಳತನ ಎಸಗಲಾಗಿದೆ. 50 ಗ್ರಾಂ ಬಂಗಾರದ ಆಭರಣ ಹಾಗೂ 50 ಸಾವಿರ ರೂ. ಕಳ್ಳತನ ಮಾಡಲಾಗಿದೆ.
ಸದಲಗಾ ಠಾಣೆಯಲ್ಲಿ ದೂರು ದಾಖಲಾಗಿದೆ.