Select Your Language

Notifications

webdunia
webdunia
webdunia
webdunia

ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ಇಲ್ಲಿದೆ ಮನೆಮದ್ದು

ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ಇಲ್ಲಿದೆ ಮನೆಮದ್ದು
ಬೆಂಗಳೂರು , ಶನಿವಾರ, 24 ನವೆಂಬರ್ 2018 (07:08 IST)
ಬೆಂಗಳೂರು : ಹೆಚ್ಚಿನವರಿಗೆ ದೇಹದಲ್ಲಿ ಅಧಿಕ ಪ್ರಮಾಣದ ಕೊಬ್ಬು ಶೇಖರಣೆಯಾಗಿರುತ್ತದೆ. ಇದರಿಂದ ಅವರು ನೋಡಲು ತುಂಬಾ ದಪ್ಪವಾಗಿ ಅಸಹ್ಯವಾಗಿ ಕಾಣಿಸುತ್ತಾರೆ. ಇದನ್ನು ಮನೆ ಮದ್ದಿನಿಂದ ನಿವಾರಿಸಿಕೊಳ್ಳಬಹುದು.


ಸಾಸಿವೆ ಎಣ್ಣೆ 100ml ಹಾಗೂ ಕರ್ಪೂರ 50gms ಬಿಸಿ ಮಾಡಿಕೊಳ್ಳಿ. ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಕರ್ಪೂರ ಕರಗುವವರೆಗೂ ಬಿಸಿ ಮಾಡಿ. ನಂತರ ಅದು ತಣ್ಣಗಾದ ಮೇಲೆ ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿಇಡಿ. ಈ ಎಣ್ಣೆಯನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ನಿಮ್ಮ ದೇಹದಲ್ಲಿ ಎಲ್ಲಿ ಕೊಬ್ಬು ಹೆಚ್ಚಾಗಿ ಶೇಖರಣೆಯಾಗಿದೆಯೋ ಆ ಭಾಗದಲ್ಲಿ 8-10 ನಿಮಿಷ ಮಸಾಜ್ ಮಾಡಿ. ನಂತರ ½ ಗಂಟೆ ಬಿಟ್ಟು ಕಡಲೆಹಿಟ್ಟನ್ನು ಬಳಸಿ ಸ್ನಾನ ಮಾಡಿ . ಇದನ್ನು ಪ್ರತಿದಿನ ಮಾಡದ್ರೆ 2 ರಿಂದ 3 ತಿಂಗಳಲ್ಲೇ ಉತ್ತಮ ಫಲಿತಾಂಶ ಸಿಗುತ್ತದೆ.


ಆದರೆ ಇದು ದೇಹದ ಉಷ್ಣತೆಯನ್ನು ಹೆಚ್ಚಾಗಿಸುವುದರಿಂದ ದಿನಕ್ಕೆ 4 ಲೀಟರ್ ನೀರು ಕುಡಿಯಲೇ ಬೇಕು. ಅದರ ಜೊತೆಗೆ ಈ ಪಾನೀಯವನ್ನು ಕುಡಿಯಬೇಕು. ಅದನ್ನು ಮಾಡುವ ವಿಧಾನ ಇಲ್ಲಿದೆ.


200ml ನೀರಿನ್ನು ಕುದಿಸಿ ಅದಕ್ಕೆ ಜೀರಿಗೆ ಪುಡಿ 1 ಟೀ ಸ್ಪೂನ್, ಜಜ್ಜಿದ  ½  ಇಂಚು ಶುಂಠಿ ಹಾಕಿ 8-10 ನಿಮಿಷ ಕುದಿಸಿ. ಅದನ್ನು ಸೋಸಿ ಅದಕ್ಕೆ 1 ಮಧ್ಯಗಾತ್ರದ ನಿಂಬೆಹಣ್ಣಿನ ರಸನ ಹಾಕಿ ಉಗುರುಬೆಚ್ಚಗಾದ ಮೇಲೆ ಕುಡಿಯಿರಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸುಸ್ತು, ಆಯಾಸ ಕಡಿಮೆಯಾಗಲು ಮನೆಯಲ್ಲೇ ತಯಾರಿಸಿದ ಈ ಎನರ್ಜಿ ಡ್ರಿಂಕ್ ಸೇವಿಸಿ