Publish Date: Wed, 03 Nov 2021 (16:25 IST)
Updated Date: Wed, 03 Nov 2021 (16:32 IST)
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ದಿಢೀರ್ ಹೆಚ್ಚಳವಾದ ಹಿನ್ನೆಲೆಯಲ್ಲಿ ಬರುವ ಜನವರಿ ವೇಳೆಗೆ ಊಟ, ತಿಂಡಿಯ ಬೆಲೆ ಏರಿಸುವ ಕುರಿತು ತೀರ್ಮಾನಿಸಲಿದ್ದೇವೆ ಎಂದು ಬೃಹತ್ ಬೆಂಗಳೂರು ಹೋಟಲ್‌ಗಳ ಸಂಘ ಅಧ್ಯಕ್ಷ ಪಿ.ಸಿ ರಾವ್ ತಿಳಿಸಿದರು.ಈ ಕುರಿತು ಮಾಹಿತಿ ನೀಡಿದ ಅವರು, 1,794 ರು.ಗೆ ಸಿಗುತ್ತಿದ್ದ 19 ಕೆ.ಜಿ. ತೂಕದ ಒಂದು ವಾಣಿಜ್ಯ ಸಿಲಿಂಡರ್‌ನ ಬೆಲೆ ಇದೀಗ 2060 ರು.ಗೆ ಏರಿಕೆಯಾಗಿದೆ. ಇದು ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಹೋಟಲ್ ಉದ್ಯಮವನ್ನು ಮತ್ತಷ್ಟುಆರ್ಥಿಕ ನಷ್ಟಕ್ಕೆ ತಳ್ಳಲಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ತೈಲ ಬೆಲೆ ಏರಿಕೆ ನಿಯಂತ್ರಿಸುವಂತೆ ಸಂಘದಿಂದ ಮನವಿ ಮಾಡಿದ್ದೇವೆ ಎಂದರು.
ಮುಂದಿನ ವಾರ ಮತ್ತೊಮ್ಮೆ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಕಾದು ನೋಡುತ್ತೇವೆ. ಜನವರಿ ವೇಳೆಗೆ ಇಂಧನ, ಸಿಲೆಂಡರ್ ದರ ಹತೋಟಿಗೆ ಬಾರದಿದ್ದರೆ ಸಂಘದ ಸದಸ್ಯರ ಜತೆ ಚರ್ಚಿಸಿ ನಂತರ ಊಟ, ತಿಂಡಿ ಬೆಲೆ ಏರಿಸುತ್ತೇವೆ. ಸದ್ಯಕ್ಕೆ ಬೆಲೆ ಏರಿಸುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.