ಬೆಂಗಳೂರು-ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಹಾಹಾಕಾರ ಬೆನ್ನಲ್ಲೇ ಟ್ಯಾಂಕರ್ ದರ ಇದ್ದಕ್ಕಿದ್ದಂತೆ ದುಪ್ಪಟ್ಟು ಹೆಚ್ಚಳವಾಗಿದೆ.ಪ್ರತಿದಿನ ಟ್ಯಾಂಕರ್ ಪಡೆಯುವ ಹೋಟೆಲ್ ಗೂ ದರ ಹೆಚ್ಚಳದ ಬಿಸಿ ಎದುರಾಗಿದೆ.ಒಂದು ದಿನ ಮೊದಲೇ ನೀರಿನ ಟ್ಯಾಂಕರ್ ಮಾಹಿತಿ ನೀಡಬೇಕು.ಒಂದೆರಡು ಗಂಟೆಯಲ್ಲಿ ಟ್ಯಾಂಕರ್ ನೀರು ಪೂರೈಕೆ ಇಲ್ಲ.
ಈ ಮೊದಲು 4 ಸಾವಿರ ಲೀಟರ್ ಟ್ಯಾಂಕರ್ 400-500 ರೂ ಇತ್ತು, ಇದೀಗ 800-1000 ಸಾವಿರ ರೂಪಾಯಿ ಆಗಿದೆ.ಈಗ ಹೋಟೆಲ್ ಗೂ ನೀರಿನ ಅಭಾವ ಆಗ್ತಿದೆ.ಟ್ಯಾಂಕರ್ ನವರು ಡಬಲ್ ರೇಟ್ ಕೇಳ್ತಿದಾರೆ.ಅದು ಒಂದು ದಿನ ಮುಂಚೆನೇ ಆರ್ಡರ್ ಮಾಡಬೇಕು ಎಂದು ಬೆಂಗಳೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಹೇಳಿದ್ದಾರೆ.
ಹೋಟೆಲ್ ನಲ್ಲಿ ನೀರು ಮಿತವಾಗಿ ಬಳಕೆ ಮಾಡಿ.ಸರ್ಕಾರ ನೀರು ಪೂರೈಕೆ ವಿಚಾರವಾಗಿ ಮೊದಲೇ ಕ್ರಮಕೈಗೊಳ್ಳಬೇಕಿತ್ತು.ನೀರು ಮರು ಬಳಕೆಯ ಬಗ್ಗೆ ಮುಂದಾಗಬೇಕಿದೆ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ .ಸಿ ರಾವ್ ಹೇಳಿದ್ದಾರೆ.