Select Your Language

Notifications

webdunia
webdunia
webdunia
webdunia

ನಾಮ ಚಿಲುಮೆಯಲ್ಲಿ ರಾಮ ಭಕ್ತರ ಉತ್ಸಾಹಕ್ಕೆ ಬ್ರೇಕ್‌

 ರಾಮ ಮಂದಿರ

geetha

ತುಮಕೂರು , ಭಾನುವಾರ, 21 ಜನವರಿ 2024 (16:40 IST)
ತುಮಕೂರು :ನಾಮದ ಚಿಲುಮೆಗೆ ಪೌರಾಣಿಕೆ ಹಿನ್ನೆಲೆಯೂ ಇದ್ದು ರಾಮ ವನವಾಸಕ್ಕೆ ಬಂದಿದ್ದಾಗ ಇಲ್ಲಿ ತಂಗಿದ್ದನೆಂದು ನಂಬಲಾಗುತ್ತದೆ. ಹೀಗಾಗಿ ಇಲ್ಲಿ ನಾಳೆ ವಿಜೃಂಭಣೆಯಿಂದ ರಾಮ ಪ್ರತಿಷ್ಠಾಪನಾ ಮುಹೂರ್ತವನ್ನು ಆಚರಿಸಲು ಶ್ರೀರಾಮ ಗೆಳೆಯರ ಬಳಗ ಅನುಮತಿ ಕೋರಿತ್ತು. ಈ ಪ್ರದೇಶವು ಮೀಸಲು ಅರಣ್ಯಕ್ಕೆ ಸೇರಿರುವ ಪ್ರದೇಶವಾಗಿರುವುದರಿಂದ ಅನುಮತಿ ನಿರಾಕರಿಸಿ ಡಿಎಫ್‌ಓ ಅನುಪಮ ಹಿಂಬರಹ ನೀಡಿದ್ದಾರೆ. 

ಸೋಮವಾರದಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ನಾಮದ ಚಿಲುಮೆಯಲ್ಲಿ ಸಂಭ್ರಮಾಚರಣೆಗಳನ್ನು ನಡೆಸಲು ಭಕ್ತರು ನೀಡಿದ್ದ ಕೋರಿಕೆಯನ್ನು ಅರಣ್ಯ ಇಲಾಖೆ ನಿರಾಕರಿಸಿದೆ.  ನಾಳೆ ನಾಮಚಿಲುಮೆಯ ಬಳಿ ಯಾವುದೇ ಹೋಮ, ಹವನ , ಪೂಜೆ, ಅನ್ನ ಸಂತರ್ಪಣೆ ಮಾಡಬಾರದು ಎಂದು ಅರಣ್ಯ ಇಲಾಖೆ ಫರ್ಮಾನು ಹೊರಡಿಸಿರುವುದು ರಾಮಭಕ್ತರ ಕಣ್ಣು ಕೆಂಪಗಾಗಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತಡೇ ಆಚರಿಸಿಕೊಳ್ಳಲ್ಲ ಎಂದ ನಿಖಿಲ್ ಕುಮಾರಸ್ವಾಮಿ