Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮತ್ತೆ ಮರ್ಯಾದೆ ಹತ್ಯೆ ಶಂಕೆ?

ಮರ್ಯಾದೆ ಹತ್ಯೆ
ದಾವಣಗೆರೆ , ಸೋಮವಾರ, 9 ಜುಲೈ 2018 (18:33 IST)
ಮರ್ಯಾದೆಗೆ ಹೆದರಿ ಅಜ್ಜಿ ಮೊಮ್ಮಗಳನ್ನೇ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ಚನ್ನಗಿರಿ ತಾಲೂಕಿನ ಮರವಂಜಿಯಲ್ಲಿ ನಡೆದಿದೆ. ಬಾಲಕಿ ಕೆಲ ದಿನಗಳ‌ ಹಿಂದೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ್ದಳು, ಆತ್ಮಹತ್ಯೆ ಯತ್ನ ನಡೆಸಿದ ವೇಳೆ ಅಜ್ಜಿ ಹಗ್ಗದಿಂದ ಬಿಗಿದ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.

ಅನುಮಾನಗೊಂಡು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು, ಬಳಿಕ ವಿಚಾರಣೆ ನಡೆಸಿದ ಪೊಲೀಸರು ವರದಿ ಆಧಾರದ ಮೇಲೆ ಅಜ್ಜಿ ದ್ರಾಕ್ಷಾಯಣಿ, ತಂದೆ ಪುರುಷೋತ್ತಮನನ್ನು ಬಂಧಿಸಿ ವಿಚಾರಣೆಗೆ ಒಳ ಪಡಿಸಿದ್ದಾರೆ.  ಕಳೆದ ಕೆಲ ತಿಂಗಳ ಹಿಂದೆ ಬಾಲಕಿ ಅನ್ಯ ಕೋಮಿನ ಯುವಕನ‌ ಜೊತೆ ಓಡಿ ಹೋಗಿದ್ದಳು. ಬಾಲಕಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಫೋಕ್ಸೋ ದೂರು ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿದ್ದರು. ಆದರೆ ಮತ್ತೆ ಬಾಲಕಿ ಆತನನ್ನೇ ಮದುವೆಯಾಗುವುದಾಗಿ  ಹಠ ಹಿಡಿದು 2 ನೇ ಬಾರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಅಜ್ಜಿ  ಹಗ್ಗದಿಂದ ಕತ್ತು ಹಿಸುಕಿದ್ದಾಳೆ, ಮೊದಲೆ ವಿಷ ಕುಡಿದಿದ್ದ ಬಾಲಕಿ ಪ್ರತಿರೋಧ ತೋರದೆ  ಕೊನೆಯುಸಿರು ಎಳೆದಿದ್ದಾಳೆ ಎನ್ನಲಾಗಿದೆ.

ಇನ್ನೂ ಚನ್ನಗಿರಿ ಪೊಲೀಸರು ಅಜ್ಜಿ ದ್ರಾಕ್ಷಾಯಣಿ ಹಾಗೂ ತಂದೆ ಪುರುಷೋತ್ತಮನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳೆಗಾರರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ!