Select Your Language

Notifications

webdunia
webdunia
webdunia
webdunia

ಮನೆ ಟ್ಯಾಕ್ಸ್ ಎಷ್ಟು ಹೆಚ್ಚಾಗಿದೆ ಗೊತ್ತಾ?

ಮನೆ ಟ್ಯಾಕ್ಸ್ ಎಷ್ಟು ಹೆಚ್ಚಾಗಿದೆ ಗೊತ್ತಾ?
ಬಳ್ಳಾರಿ , ಮಂಗಳವಾರ, 12 ಮೇ 2020 (14:07 IST)
ಮನೆ ಹಾಗೂ ಗೃಹೇತರ ಟ್ಯಾಕ್ಸ್ ಹೆಚ್ಚಳ ಆಗುತ್ತಲೇ ಇರುತ್ತದೆ. ಇದಕ್ಕೆ ಸಚಿವರೊಬ್ಬರು ಕಾರಣ ಕೊಟ್ಟಿದ್ದಾರೆ.

ನಗರಗರಳ ಅಭಿವೃದ್ದಿ ದೃಷ್ಠಿಯಿಂದ ಗೃಹ ಮತ್ತು ಗೃಹೇತರ ತೆರಿಗೆ ಹೆಚ್ಚಳ ಅನಿವಾರ್ಯವಾಗಿದೆ. ಹೀಗಂತ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.

ಬಳ್ಳಾರಿ ನಗರದಲ್ಲಿ ಮಾತನಾಡಿದ ಅವರು, ನಗರ ಪಾಲಿಕೆಗಳು ಸ್ವಯಂ ಸಂಪನ್ಮೂಲ ಕ್ರೂಢೀಕರಣ ಮಾಡಿಕೊಳ್ಳಬೇಕು. ಅದಕ್ಕಾಗಿ ಆಸ್ತಿಗಳ ಮೇಲೆ ತೆರಿಗೆ ವಿಧಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ಈ ತೆರಿಗೆ ಹೆಚ್ಚಳವಾಗಿರಲಿಲ್ಲ. ಅದಕ್ಕಾಗಿ ಈ ವರ್ಷ 2020-21 ಸಾಲಿಗೆ ವಸತಿಯುತ ಆಸ್ತಿಗಳಿಗೆ ಶೇಕಡ 20 ರಷ್ಟು ಮತ್ತು ವಸತಿಯೇತರ (ವಾಣಿಜ್ಯ) ಬಳಕೆಯ ಆಸ್ತಿಗಳಿಗೆ ಶೇಕಡ 25 ರಷ್ಟು ಹೆಚ್ಚಳ ಮಾಡಿದೆ ಎಂದಿದ್ದಾರೆ.

ಪಾಲಿಕೆಗಳಲ್ಲಿ ಆಡಳಿತಕ್ಕೆ ಸಿಬ್ಬಂದಿ ಮತ್ತು ಸ್ವಚ್ಛತೆಗೆ ಪೌರ ಕಾರ್ಮಿಕರ ಕೊರತೆ ಇರುವುದು ಗಮನಕ್ಕೆ ಬಂದಿದೆ. ಅವರ ನೇಮಕಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ  ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತಿನಿಂದ ಬಂದ ರಾಜ್ಯದ 9 ಜನರಿಗೆ ಕೊರೊನಾ