Webdunia - Bharat's app for daily news and videos

Install App

HMPV ವೈರಸ್ ಇಫೆಕ್ಟ್: ದೇವ್ರೇ ಇನ್ನೊಂದು ಲಾಕ್ ಡೌನ್ ಬೇಡ್ವೇ ಬೇಡ ಅಂತಿರೋದು ಯಾರು

Krishnaveni K
ಸೋಮವಾರ, 6 ಜನವರಿ 2025 (16:29 IST)
ಬೆಂಗಳೂರು: ಚೀನಾದ ಡೇಂಜರಸ್ ಎಚ್ಎಂಪಿವಿ ವೈರಸ್ ಬೆಂಗಳೂರು ಸೇರಿದಂತೆ ಭಾರತಕ್ಕೆ ಕಾಲಿಟ್ಟ ಬೆನ್ನಲ್ಲೇ ಜನರಲ್ಲಿ ಲಾಕ್ ಡೌನ್ ಬಗ್ಗೆ ಭಯ ಶುರುವಾಗಿದೆ. ದೇವ್ರೇ ಇನ್ನೊಂದು ಲಾಕ್ ಡೌನ್ ಬೇಡ್ವೇ ಬೇಡ ಎನ್ನುತ್ತಿದ್ದಾರೆ.

ಸದ್ಯದ ವರದಿಗಳ ಪ್ರಕಾರ ಎಚ್ಎಂಪಿವಿ ವೈರಸ್ ಅಷ್ಟೊಂದು ಅಪಾಯಕಾರಿ ಅಲ್ಲ. ಹಾಗಿದ್ದರೂ ಮುನ್ನೆಚ್ಚರಿಕೆ ಅಗತ್ಯ ಎಂದು ಆರೋಗ್ಯ ಇಲಾಖೆ ಎಚ್ಚರಿಸುತ್ತಲೇ ಇರುತ್ತದೆ. ಇಂದು ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್ಎಂಪಿವಿ ವೈರಸ್ ಕೇಸ್ ಪತ್ತೆಯಾಗಿದೆ.

ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಎಚ್ಎಂಪಿವಿ ವೈರಸ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಅದರಲ್ಲೂ ಕೆಲವರಿಗೆ ಮತ್ತೆ ಲಾಕ್ ಡೌನ್ ಆದರೆ ಎಂಬ ಭಯ ಶುರುವಾಗಿದೆ. ಕಳೆದ ಬಾರಿ ಕೊರೋನಾ ವೈರಸ್ ಬಂದಿದ್ದಾಗ ಲಾಕ್ ಡೌನ್ ಆದ ಕರಾಳ ಅನುಭವ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ.

ಕೊರೋನಾ ಬಂದು ಐದು  ವರ್ಷವಾಗಿದ್ದು ಈ ನಡುವೆ ಎರಡು ವರ್ಷ ಸತತವಾಗಿ ಲಾಕ್ ಡೌನ್ ಆಗಿತ್ತು. ಎರಡು-ಮೂರು ತಿಂಗಳು ಮನೆಯಿಂದಲೇ ಕೆಲಸ, ಹೊರಗಡೆ ಸುತ್ತಾಡುವಂತಿಲ್ಲ ಎಂಬ ಸ್ಥಿತಿ ಎದುರಾಗಿತ್ತು. ಈಗ ಎಚ್ಎಂಪಿವಿ ವೈರಸ್ ಹಬ್ಬುತ್ತಿರುವ ಸುದ್ದಿ ತಿಳಿದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಜನ ದೇವ್ರೇ ಏನೇ ಆಗಲಿ ಮತ್ತೆ ಲಾಕ್ ಡೌನ್ ಆಗುವ ಪರಿಸ್ಥಿತಿ ಬಾರದೇ ಇರಲಿ. ರಾತ್ರೋ ರಾತ್ರಿ ಲಾಕ್ ಡೌನ್ ಎಂಬ ಘನಘೋರ ಘೋಷಣೆಯಾಗದಂತೆ ನೀನೇ ಕಾಪಾಡಪ್ಪ ದೇವರೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಗಾಂಧೀಜಿ ಬಗ್ಗೆ ತಪ್ಪು ಮಾಹಿತಿ ಕೊಟ್ರಾ ರಾಹುಲ್ ಗಾಂಧಿ: ಲೆಹರ್ ಸಿಂಗ್ ಟ್ವೀಟ್ ನಲ್ಲಿ ಏನಿದೆ ನೋಡಿ

ರಕ್ತದ ಮಡುವಿನಲ್ಲಿ ನಿವೃತ್ತ ಪೊಲೀಸ್ ಓಂ ಪ್ರಕಾಶ್‌ ಮೃತದೇಹ ಪತ್ತೆ, ಮನೆಯವರೇ ಮೇಲೆ ಡೌಟ್‌

ಸಿಎಂ ಕುರ್ಚಿ ಗುದ್ದಾಟದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್

Video vira: ವಿದ್ಯುತ್ ಶಾಕ್‌ನಿಂದ ಒದ್ದಾಟುತ್ತಿದ್ದ ಬಾಲಕನ ಪಾಲಿಗೆ ನಿಜವಾದ ಹೀರೋ ಆದ ಯುವಕ, ಇದಪ್ಪ ದೈರ್ಯ

ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

ಮುಂದಿನ ಸುದ್ದಿ
Show comments