Select Your Language

Notifications

webdunia
webdunia
webdunia
webdunia

ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ಪ್ರಕರಣ ಬಗ್ಗೆ ಎಚ್‌ಕೆ ಪಾಟೀಲ್ ಸ್ಫೋಟಕ ಹೇಳಿಕೆ

 HK Patil
Photo Credit X
ಬೆಂಗಳೂರು: ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಪ್ರಕರಣದಲ್ಲಿ ಇದೀಗ ಮನೆಯವರು ಸಿಕ್ಕಿರುವ ಚಿನ್ನವನ್ನು ವಾಪಾಸ್ ನೀಡುವಂತೆ ಕೇಳುತ್ತಿದ್ದು, ಇದರ ಬೆನ್ನಲ್ಲೇ  ಗದಗ ಉಸ್ತುವಾರಿ ಹಾಗೂ ಕಾನೂನು ಸಚಿವ ಎಚ್‌ಕೆ ಪಾಟೀಲ್ ಅವರು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. 

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಭೂಮಿಯ ಒಳಗೆ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಕ್ಕಿದರೆ ಅದು ಸರ್ಕಾರದ ಆಸ್ತಿ ಎಂದು ಮಾಧ್ಯಮವೊಂದಕ್ಕೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇನ್ನೂ ಸಿಕ್ಕ ನಿಧಿಯನ್ನು ಕುಟುಂಬವು ಪ್ರಾಮಾಣಿಕತೆಯನ್ನು ನಾನು ಗೌರವಿಸುತ್ತೇನೆ , ಅದು ನಿಧಿ ಅಲ್ಲ ಕುಟುಂಬದ ಬಂಗಾರ ಎಂದು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಅಲ್ಲಿನ ಎಎಸ್‌ಐ ಅಧಿಕಾರಿ ಸಂತೋಷ್ ಗೊಂದಲ ಮೂಡಿಸುತ್ತಿದ್ದಾರೆ. ಅನಗತ್ಯ ಗೊಂದಲ ಉಂಟು ಮಾಡಿದ ಅಧಿಕಾರಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. 

ಇನ್ನೂ ಭೂಮಿಯ ಒಳಗೆ ಸಿಕ್ಕ ಮೌಲ್ಯಯುತವಾಗಿರುವ ವಸ್ತುಗಳೆಲ್ಲ ಸರ್ಕಾರಕ್ಕೆ ಸೇರುತ್ತದೆ. ಜಿಲ್ಲಾ ಆಡಳಿತ ಆ ಬಂಗಾರವನ್ನು ಖಜಾನೆಯಲ್ಲಿ ಭದ್ರವಾಗಿ ಇರಿಸಿದೆ. ಅದು ಆ ಕುಟುಂಬಕ್ಕೆ ಸೇರಿದ್ದಾ,  ಆ ಜಾಗದ ಮೂಲ ಮಾಲಿಕರಿಗೆ ಸೇರಿದ್ದ, ರಾಷ್ಟ್ರ ಕೂಟರ ಕಾಲದ್ದ ಚಾಲುಕ್ಯರ ಕಾಲದ್ದ ಎಲ್ಲವೂ ಪರಿಶೀಲನೆಯಾಗಲಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೋಗಿಲು ಬಡಾವಣೆ ಅಕ್ರಮ: ಬಿವೈ ವಿಜಯೇಂದ್ರಗೆ ವರದಿ ಸಲ್ಲಿಸಿದ ಸತ್ಯಶೋಧನಾ ತಂಡ, video