Select Your Language

Notifications

webdunia
webdunia
webdunia
webdunia

ಕೋಗಿಲು ಬಡಾವಣೆ ಅಕ್ರಮ: ಬಿವೈ ವಿಜಯೇಂದ್ರಗೆ ವರದಿ ಸಲ್ಲಿಸಿದ ಸತ್ಯಶೋಧನಾ ತಂಡ, video

BJP President BY Vijjayendra
Photo Credit X
ಬೆಂಗಳೂರು: ಕೋಗಿಲು ಬಡಾವಣೆಯ ಅಕ್ರಮ ಒತ್ತುವರಿ ತೆರವು ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿವೈ ವಿಜಯೇಂದ್ರಗೆ ಸತ್ಯಶೋಧನಾ ತಂಡಕ್ಕೆ ವರದಿ ಸಲ್ಲಿಸಲಿದೆ.

ಈ ವಿಚಾರ ಸಂಬಂಧ ಎಕ್ಸ್‌ನಲ್ಲಿ ಬಿವೈ ವಿಜಯೇಂದ್ರ ಬರೆದುಕೊಂಡಿದ್ದಾರೆ. 

ಬೆಂಗಳೂರಿನ ಯಲಹಂಕದ ಕೋಗಿಲು ಬಡಾವಣೆಯಲ್ಲಿ ಅಕ್ರಮ ವಲಸಿಗರ ಮನೆಗಳ ತೆರವು ವಿಚಾರದಲ್ಲಿ ರಚಿಸಲಾಗಿದ್ದ ಪಕ್ಷದ ಸತ್ಯ ಶೋಧನಾ ಸಮಿತಿಯಿಂದ ಇಂದು ವರದಿಯನ್ನು ಸ್ವೀಕರಿಸಲಾಯಿತು.


 ಪಕ್ಷದ ಶಾಸಕರಾದ ಶ್ರೀ ಎಸ್.ಆರ್. ವಿಶ್ವನಾಥ್ ನೇತೃತ್ವದ ಸತ್ಯಶೋಧನ ತಂಡ ಸ್ಥಳಕ್ಕೆ ಭೇಟಿ ನೀಡಿ, ವ್ಯಾಪಕವಾಗಿ ಮಾಹಿತಿ ಕಲೆ ಹಾಕಿ, ಸದರಿ ಜಾಗದ ಸಂಪೂರ್ಣ ವಿವರ, ಸರ್ವೇ ನಂಬರ್, ಗೂಗಲ್ ಮ್ಯಾಪ್, ಕಾನೂನುಗಳು ಸೇರಿದಂತೆ ಸಮಗ್ರ ವಿವರವನ್ನು ಒಳಗೊಂಡ ವರದಿಯನ್ನು ಸಲ್ಲಿಸಿದೆ.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರುಗಳಾದ ಶಾಸಕ ಶ್ರೀ ಎಸ್.ಮುನಿರಾಜು, ವಿಧಾನಪರಿಷತ್ ಸದಸ್ಯ ಶ್ರೀ ಕೆ.ಎಸ್. ನವೀನ್, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್, ರಾಜ್ಯ ಕಾರ್ಯದರ್ಶಿ ಶ್ರೀ ಹೆಚ್.ಸಿ.ತಮ್ಮೇಶ್  ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್ ಹರೀಶ್, ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಭಾಸ್ಕರ್  ರಾವ್ ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೋಗಿಲು ಲೇಔಟ್ ನಲ್ಲಿ ಒಬ್ಬರೇ ಒಬ್ರು ಕೇರಳದವರಿಲ್ಲ ಹಾಗಿದ್ರೂ ಅವರು ಯಾಕೆ ಕೂಗಾಡಿದ್ರು: ಎಸ್ ಆರ್ ವಿಶ್ವನಾಥ್