Daily Horoscope

Select Your Language

Notifications

webdunia
webdunia
webdunia
webdunia

ಲಕ್ಕುಂಡಿ ನಿಧಿ ವಿಚಾರದಲ್ಲಿ ಕೊನೆಗೂ ಮಹತ್ವದ ತೀರ್ಮಾನ ತೆಗೆದುಕೊಂಡ ಪುರಾತತ್ವ ಇಲಾಖೆ

Lakkundi treasure
ಗದಗ: ಲಕ್ಕುಂಡಿಯಲ್ಲಿ ಮನೆಗೆ ಪಾಯ ತೆಗೆಯುವಾಗ ಸಿಕ್ಕ ನಿಧಿ ಬಗ್ಗೆ ಕೊನೆಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಮಹತ್ವದ ಹೇಳಿಕೆ ನೀಡಿದ್ದಾರೆ.

ಮನೆಗೆ ಪಾಯ ತೆಗೆಯುವಾಗ ಸಿಕ್ಕ ಚಿನ್ನಾಭರಣಗಳನ್ನು ಕುಟುಂಬಸ್ಥರು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದರು. ಆದರೆ ಇದಾದ ಬಳಿಕ ಕುಟುಂಬಸ್ಥರಿಗೆ ನಿವೇಶನವೂ ಇಲ್ಲ, ಮನೆಯೂ ಇಲ್ಲ ಎಂಬ ಸ್ಥಿತಿಯಾಗಿದೆ. ಇದರ ಬೆನ್ನಲ್ಲೇ ಇದು ನಿಧಿಯಲ್ಲ, ಪೂರ್ವಜರು ಹೂತಿಟ್ಟಿದ್ದ ಚಿನ್ನ ಎಂದು ಕೆಲವು ಅಧಿಕಾರಿಗಳೇ ಹೇಳಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಕುಟುಂಬಸ್ಥರು ನಮ್ಮ ಚಿನ್ನ ನಮಗೆ ಕೊಡಿ, ನಾವು ಬೀದಿಗೆ ಬಂದಿದ್ದೇವೆ, ನಮಗೆ ಸಹಾಯ ಮಾಡಿ ಎಂದು ಅಂಗಲಾಚಿತ್ತು. ಇದರ ನಡುವೆಯೇ ಈಗ ಪುರಾತತ್ವ ಇಲಾಖೆ ಅಧಿಕಾರಿಗಳು ಮಹತ್ವದ ಹೇಳಿಕೆ ನೀಡಿದ್ದಾರೆ.

‘ನಿಯಮಗಳ ಪ್ರಕಾರ ನಿಧಿ ಕಂಡುಕೊಂಡ ಕುಟುಂಬಕ್ಕೆ ಐದನೇ ಒಂದು ಭಾಗದಷ್ಟು ಅಂದರೆ ಶೇ.20 ರಷ್ಟು ಚಿನ್ನದ ಮೌಲ್ಯ ವಾಪಸ್ ಮಾಡುತ್ತೇವೆ. ಪ್ರಮಾಣಿಕವಾಗಿ ನಿಧಿ ಒಪ್ಪಿಸಿದವರಿಗೆ ಪರಿಹಾರಕ್ಕೆ ಅವಕಾಶವಿದೆ’ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಈಗ ಕುಟುಂಬಕ್ಕೆ ಚಿನ್ನದ ಬಾಬ್ತು ಸ್ವಲ್ಪವಾದರೂ ನಗದು ಸಿಗಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಜಿಬಿಎ ಚುನಾವಣೆಗೆ ಗಡುವು ನೀಡಿದ ಸುಪ್ರೀಂ ಕೋರ್ಟ್‌: ಸರ್ಕಾರಕ್ಕೆ ಕೊಟ್ಟ ನಿರ್ದೇಶನ ಏನು ಗೊತ್ತಾ