ಮೈಸೂರು: 2020 ರಲ್ಲಿ ಹಿಂದೂ ಜಾಗವಾಗಿತ್ತು, ಆದರೆ 2024 ರ ದಾಖಲೆ ಪ್ರಕಾರ ಸ್ಮಶಾನವೊಂದು ಸದ್ದಿಲ್ಲದೇ ವಕ್ಫ್ ಆಸ್ತಿಯಾಗಿ ಮಾರ್ಪಟ್ಟಿದೆ. ಇದು ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ನಡೆದ ಕರಾಮತ್ತು.
ರಾಜ್ಯಾದ್ಯಂತ ರೈತರು, ಮಠ-ಮಂದಿರಗಳು, ಸ್ಮಶಾನ, ಸರ್ಕಾರೀ ಭೂಮಿಯ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗುತ್ತಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೀಗ ವರುಣಾ ಕ್ಷೇತ್ರದ ಸ್ಮಶಾನವೊಂದು 2020 ರ ದಾಖಲೆಗಳ ಪ್ರಕಾರ ಹಿಂದೂ ಆಸ್ತಿಯಾಗಿತ್ತು. 2024 ರಲ್ಲಿ ಇದು ವಕ್ಫ್ ಆಸ್ತಿ ಎಂದು ನಮೂದಾಗಿದೆ.
ರಂಗಸಮುದ್ರ ಗ್ರಾಮದ ಸರ್ವೇ ನಂಬರ್ 257 ರ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಮೊದಲು ಈ ಜಾಗ ಹಿಂದೂ ರುದ್ರಭೂಮಿಯಾಗಿತ್ತು. ಆದರೆ ಈಗ ದಾಖಲೆಯಲ್ಲಿಮುಸ್ಲಿಮರ ಖಬ್ರಸ್ಥಾನ ಎಂದು ನಮೂದಾಗಿದೆ. ಜಮೀನಿನಲ್ಲಿ ಹಿಂದೂ ಸಮಾಧಿಗಳಿವೆ. ಹಾಗಿದ್ದರೂ ಮುಸ್ಲಿಮ್ ಖಬ್ರಸ್ಥಾನ ಎಂದು ನಮೂದಾಗಿದೆ.
ಇಷ್ಟು ದಿನ ಹಿಂದೂ ಸ್ಮಶಾನವಾಗಿದ್ದ ಜಾಗ ಇದ್ದಕ್ಕಿದ್ದ ಹಾಗೆ ಮುಸ್ಲಿಮ್ ಸ್ಮಶಾನವಾಗಿದ್ದು ಹೇಗೆ? ಇದರಲ್ಲಿ ಯಾರ ಕೈವಾಡವಿದೆ. ವಕ್ಫ್ ಆಸ್ತಿ ಎಂದು ನಮೂದಿಸಲು ದಾಖಲೆಗಳೇನು ಎನ್ನುವುದಕ್ಕೆ ಉತ್ತರವಿಲ್ಲ.