Select Your Language

Notifications

webdunia
webdunia
webdunia
webdunia

ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಹಾಳು ಮಾಡಲು ಬಿಜೆಪಿ ಷಡ್ಯಂತ್ರ ಮಾಡಿದೆ: ದಿನೇಶ್ ಗುಂಡೂರಾವ್‌

Minister Dinesh Gundurao, MUDA Scam, Chief Minister Siddaramaiah

Sampriya

ಬೆಂಗಳೂರು , ಗುರುವಾರ, 7 ನವೆಂಬರ್ 2024 (17:43 IST)
Photo Courtesy X
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಹಾಳು ಮಾಡಲು ಬಿಜೆಪಿಯವರು ಮುಡಾ ಕೇಸ್‌ನಲ್ಲಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕಿಡಿಕಾರಿದರು.

ಮುಡಾ ಹಗರಣ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿಚಾರಣೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ದುರುದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಹಾಳು ಮಾಡಲು ಬಿಜೆಪಿಯವರು ನೋಡುತ್ತಿದ್ದಾರೆ. ಅದಕ್ಕಾಗಿಯೇ ಸಿಎಂ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ.

ಕೇಂದ್ರದ ಏಜೆನ್ಸಿಗಳನ್ನು ಬಿಟ್ಟು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮಾಧ್ಯಮದವರು, ರಾಜಕಾರಣಿಗಳು, ಎನ್‌ಜಿಓ ಯಾರನ್ನು ಬಿಜೆಪಿಯವರು ಬಿಟ್ಟಿಲ್ಲ. ಅಧಿಕಾರ ಬಳಸಿ ಹೆದರಿಕೆ, ಬೆದರಿಕೆ ಹಾಕುತ್ತಿದ್ದಾರೆ. ಇದು ಮೋದಿ ಸರ್ಕಾರ ದೇಶದ ಪರಿಸ್ಥಿತಿ ಎಂದು ಆಕ್ರೋಶ ಹೊರಹಾಕಿದರು.

ತುರ್ತುಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿ ಇವತ್ತು ದೇಶದಲ್ಲಿದೆ. ಇಡಿ, ಐಟಿ ಬಳಸಿಕೊಂಡು ಅವರ ವಿರೋಧಿಗಳನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಅಜೆಂಡಾ ಸಿದ್ದರಾಮಯ್ಯ ಅವರನ್ನು ಮುಗಿಸುವುದು ಎಂದು ಆರೋಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಆದ ಮೇಲೆ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಶಿಕ್ಷಕಿ ಇದೇನು ಮಾಡಿಬಿಟ್ಟಳು