ಬಳ್ಳಾರಿ: ಸಂಡೂರು ಉಪಚುನಾವಣೆ ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ ರೆಡ್ಡಿ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿ ಲೂಟಿ ಹೊಡೆದಿರುವ ರೆಡ್ಡಿ ಪಟಾಲಂನನ್ನು ಇಲ್ಲಿಂದ ದೂರ ಓಡಿಸಬೇಕು ಎಂದಿದ್ದಾರೆ.
ನಿಮಗೆಲ್ಲಾ ಗೊತ್ತಿದೆ ಜನಾರ್ಧನ ರೆಡ್ಡಿ ಯಾರು ಏನು ಅಂತ ಎಲ್ಲಾ ಗೊತ್ತಿದೆ. ಜನಾರ್ಧನ ರೆಡ್ಡಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಮಾಡಿಕೊಂಡಿದ್ದರು. ಅಕ್ರಮ ಗಣಿಗಾರಿಕೆ ಮಾಡಿ ಲೂಟಿ ಹೊಡೆದವರು. ಅವರು ಈಗ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತೀವಿ ಎಂದು ಜವಾಬ್ಧಾರಿ ತೆಗೆದುಕೊಂಡಿದ್ದಾರೆ.
ದಯಮಾಡಿ ನೀವೆಲ್ಲಾ ಯೋಚನೆ ಮಾಡಬೇಕು. ನಾವೆಲ್ಲಾ ಯಾಕೆ ಪಾದಯಾತ್ರೆ ಮಾಡಿದ್ದೆವು. ಬೆಂಗಳೂರಿನಿಂದ ಬಳ್ಳಾರಿಯವರೆಗೆ ಜನಾರ್ಧನ ರೆಡ್ಡಿ ಮತ್ತು ಪಟಾಲಂ ಬಳ್ಳಾರಿ ಜಿಲ್ಲೆಯನ್ನು ಲೂಟಿ ಮಾಡ್ತಿದ್ದಾರೆ, ಹಫ್ತಾ ವಸೂಲಿ ಮಾಡಿ ಲೂಟಿ ಮಾಡ್ತಿದ್ದಾರೆ. ಇಲ್ಲಿ ಕಾನೂನಿಲ್ಲ. ಭಯದ ವಾತಾವರಣವಿದೆ. ನಿರುದ್ಯೋಗ, ಬಡತನವಿದೆ. ಇದಕ್ಕೆಲ್ಲಾ ಕಾರಣವಾದ ಜನಾರ್ಧನ ರೆಡ್ಡಿ ಮತ್ತು ಅವರ ಪಟಾಲಂ ಇಡೀ ಬಳ್ಳಾರಿ ಜಿಲ್ಲೆಯನ್ನು ಹಾಳು ಮಾಡಿದ್ದಾರೆ ಎಂದು ಪಾದಯಾತ್ರೆ ಮಾಡಿದ್ದೆವು.
ಬಳ್ಳಾರಿ ಜಿಲ್ಲೆಯನ್ನು ಭಯದ ವಾತಾವರಣದಲ್ಲಿಟ್ಟುಕೊಂಡಿದ್ದ ರೆಡ್ಡಿ ಸಹೋದರರ ಅಭ್ಯರ್ಥಿಯನ್ನು ಮತ್ತೆ ಗೆಲ್ಲಬೇಕಾ? ಮತ್ತೆ ನಿಮಗೆ ಅಂತಹ ವಾತಾವರಣ ಬೇಕಾ? ಅವರ ಸ್ವಾರ್ಥಕ್ಕೋಸ್ಕರ ಇಡೀ ಜಿಲ್ಲೆಯನ್ನು ತಮ್ಮ ವಶ ಮಾಡಿಕೊಂಡಿದ್ದವರ ಹಿಡಿತಕ್ಕೆ ಜಿಲ್ಲೆ ಹೋಗಬೇಕಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.