ನಗರದಲ್ಲಿ ಜಮ್ಮು ಕಾಶ್ಮೀರ ಪೊಲೀಸರಿಂದ ಬಂಧನಕ್ಕೊಳಗಾದ ಹಿಜ್ಜುಲ್ ಮುಜಾಹಿದೀನ್ ಸಂಘಟನೆಯ ಉಗ್ರ ತಾಲೀಬ್ ಹುಸೈನ್ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ತನಿಖೆ ಕೈಗೊಳ್ಳುವಂತೆ ಭಜರಂಗದಳ ಹಾಗು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಹಿಂದೂ ಸಂಘಟನೆಯ ಮುಖಂಡರಾದ ತೇಜಸ್ ಗೌಡ, ಗೋವರ್ಧನ್ ಹಾಗು ಶಿವಕುಮಾರ್ ನೇತೃತ್ವದ ತಂಡದಿಂಧ ದೂರು ನೀಡಲಾಗಿದೆ. ನಂತರ ಮಾತನಾಡಿದ ಹಿಂದೂ ಸಂಘಟನೆಯ ಮುಖಂಡ ತೇಜಸ್ ಗೌಡ ಬಂಧಿತನಾದ ಉಗ್ರ ತಾಲೀಬ್ ಹುಸೈನ್ ಗೆ ನಗರದಲ್ಲಿ ಆಶ್ರಯ ಕೊಟ್ಟವರು, ಸಿಮ್ ಕಾರ್ಡ್ ಕೊಟ್ಟವರನ್ನೂ ಕೂಡ ವಿಚಾರಣೆಗೊಳಪಡಿಸಬೇಕು ಹಾಗೂ ಆತ ಪ್ರಾರ್ಥನೆ ಸಲ್ಲಿಸಿ ಬೋಧನೆ ಮಾಡುತ್ತಿದ್ದ ಮಸೀದಿಯನ್ನು ಮುಚ್ಚಿಸಬೇಕು ಅಲ್ಲದೆ ಎರಡು ವರ್ಷದಲ್ಲಿ ಆತ ಎಲ್ಲೆಲ್ಲಿ ಸಭೆಗಳನ್ನು ಮಾಡಿದ್ದ, ಅಲ್ಲಿ ಉಗ್ರವಾದದ ಬಗ್ಗೆ ಯಾರಿಗೆ ಪ್ರಚೋದನೆ ನೀಡಿದ್ದಾನೆ ಎಂಬುದರ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.