ಕರಾವಳಿಯಲ್ಲಿ ಹಿಜಾಬ್ ಸಮರ ಮುಂದುವರಿದ ಪರಿಣಾಮ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಅವಕಾಶ ಇಲ್ಲದ ಕಾಲೇಜುಗಳಿಂದ TC ಹಿಂಪಡೆದಿದ್ದಾರೆ. ದ.ಕನ್ನಡ, ಉಡುಪಿ, ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಶೇ.16 ಮುಸ್ಲಿಂ ವಿದ್ಯಾರ್ಥಿನಿಯರು TC ತೆಗೆದು ಖಾಸಗಿ ಕಾಲೇಜು ಸೇರಿದ್ದಾರೆ. ದ.ಕನ್ನಡ & ಉಡುಪಿಯಲ್ಲಿ 900 ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 145 ಮಂದಿ TC ಹಿಂಪಡೆದಿದ್ದಾರೆ. ವಿದ್ಯಾರ್ಥಿನಿಯರು TC ಪಡೆಯಲು ಕಾರಣ ಶಿಕ್ಷಣ ಸಚಿವರ ತಾರತಮ್ಯ ಎಂದು ಹಿಜಾಬ್ ಹೋರಾಟಗಾರ್ತಿ ಗೌಸಿಯಾ ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಹಂಪನಕಟ್ಟೆ ವಿವಿ ಕಾಲೇಜಿನ ವಿದ್ಯಾರ್ಥಿನಿಯಾದ ಗೌಸಿಯಾ, ಹಿಜಾಬ್ ಧರಿಸಲು ಅವಕಾಶ ಇಲ್ಲದ ಕಾರಣ ಕಾಲೇಜಿನಿಂದ ಟಿಸಿ ಪಡೆದಿದ್ದಾಳೆ. ಸಂವಿಧಾನ ನೀಡಿರುವ ಹಕ್ಕಿನ ಪ್ರಕಾರ ಶಿಕ್ಷಣ ಪಡೆಯಲು ಬಿಜೆಪಿ ಸರಕಾರ ಬಿಡಲಿಲ್ಲ. ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ಮಾಡಿದ್ದಾರೆ. ಇದರಿಂದ ಪರೋಕ್ಷವಾಗಿ ಸರ್ಕಾರಿ ಕಾಲೇಜುಗಳಿಗೆ ಹೊಡೆತ ಬೀಳಲಿದೆ. ಇಡೀ ರಾಜ್ಯಾದ್ಯಂತ 30 ಶೇ.ಕ್ಕೂ ಅಧಿಕ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಸಚಿವ ಬಿ.ಸಿ ನಾಗೇಶ್ ಎಂದು ವಿದ್ಯಾರ್ಥಿನಿ ಗೌಸಿಯಾ ಹೇಳಿಕೆ ನೀಡಿದ್ದಾಳೆ.