ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ – ಕೇಸರಿ ಶಾಲು ಸಂಘರ್ಷ ಹಿನ್ನೆಲೆ ಪ್ರೌಢಶಾಲೆ, ಕಾಲೇಜಿಗೆ ಇಂದಿನಿಂದ 3 ದಿನ ರಾಜ್ಯ ಸರ್ಕಾರದಿಂದ ರಜೆ ಘೋಷಿಸಲಾಗಿದೆ.
ಹೌದು, 9, 10ನೇ ತರಗತಿ, ಪದವಿಪೂರ್ವ ಕಾಲೇಜು, ಎಲ್ಲಾ ವಿಶ್ವವಿದ್ಯಾಲಯಗಳು, ಅವುಗಳ ಸಂಯೋಜಿತ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಇರಲಿದೆ.
ಇನ್ನು, 1ರಿಂದ 8ನೇ ತರಗತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸೇರಿ ಅದರ ಸಂಯೋಜಿತ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳಿಗೆ ರಜೆ ಇಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದ್ದು,ಇನ್ನು ರಜೆ ಇದ್ದರೂ ನಿಗದಿ ಆಗಿರುವ ಪರೀಕ್ಷೆಗಳು ಯಥಾವತ್ತಾಗಿ ನಡೆಯಲಿವೆ.
ರಾಜ್ಯದಲ್ಲಿ ಹಿಜಬ್- ಕೇಸರಿ ಶಾಲು ವಿವಾದ ಭುಗಿಲೆದ್ದಿದ್ದು, ಶಿವಮೊಗ್ಗದ ಸರ್ಕಾರಿ ಕಾಲೇಜಿನ ದ್ವಜಸ್ತಾಂಬಕ್ಕೆ ಕೇಸರಿ ದ್ವಜ ಹಾರಿಸಲಾಗಿದ್ದು, ಇನ್ನು ಕೆಲವೆಡೆ ಕೇಸರಿ ಶಾಲು ಧರಿಸಿಕೊಂಡು ಬಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಸೇರಿಸದ ಹಿನ್ನಲೆ, ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದು ಹಲವೆಡೆ ಉದ್ವಿಗ್ನ ಸ್ಥಿತಿಗೆ ಕಾರಣವಾಗಿತ್ತು.