Select Your Language

Notifications

webdunia
webdunia
webdunia
webdunia

ಹಿಜಾಬ್ ವಿವಾದ: 700ಕ್ಕೂ ಹೆಚ್ಚು ಮಂದಿಯಿಂದ ಬಹಿರಂಗ ಪತ್ರ

ಹಿಜಾಬ್ ವಿವಾದ:  700ಕ್ಕೂ ಹೆಚ್ಚು ಮಂದಿಯಿಂದ ಬಹಿರಂಗ ಪತ್ರ
bangalore , ಗುರುವಾರ, 17 ಫೆಬ್ರವರಿ 2022 (21:43 IST)
ಹಿಜಾಬ್ ವಿವಾದಕ್ಕೆ ಕರ್ನಾಟಕ ರಾಜ್ಯ ಹಿಂದುಗಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್, ಹೈಕೋರ್ಟ್‌ನ ಇಬ್ಬರು ಮಾಜಿ ನ್ಯಾಯಾಧೀಶರು ಸೇರಿದಂತೆ ಒಟ್ಟಾರೆ 700ಕ್ಕೂ ಅಧಿಕ ಮಂದಿ ಸಂಬಂಧಪಟ್ಟವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.ಇದರಲ್ಲಿ 500 ಮಂದಿ ವಕೀಲರೂ ಇದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿಚಾರಕ್ಕೆ ಪ್ರಸ್ತುತ ಮಧ್ಯಂತರ ಆದೇಶ ಹೊರಡಿಸಿದ್ದು, ಸಮವಸ್ತ್ರ ಧರಿಸುವಂತೆ ಹೇಳಲಾಗಿದೆ. ಈ ಬರೆದ ಪತ್ರಿದ್ದು, ಹೈಕೋರ್ಟ್‌ನ ಮಧ್ಯಂತರ ಆದೇಶ ಕಳವಳ ತರುವಂತಿದೆ. ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿರುವುದು ಸಾರ್ವಜನಿಕವಾಗಿ ಅವರಿಗೆ ಅವಮಾನಿಸಿದಂತೆ ಎಂದು ಬರೆಯಲಾಗಿದೆ.
ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ಹಾಕಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವ ಸಾಕಷ್ಟು ಪ್ರಕರಣಗಳು ಕಣ್ಣೆದುರಿಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಂಸ್ಥೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ. ಇದು ಉತ್ತಮ ಬೆಳವಣಿಗೆ ಅಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ದಿನ ಕೆಪಿಎಸ್‌ಸಿ, ಕೆಇಎ ಪರೀಕ್ಷೆ; ಅಭ್ಯರ್ಥಿಗಳಲ್ಲಿ ಗೊಂದಲ