Publish Date: Mon, 20 May 2019 (14:43 IST)
Updated Date: Mon, 20 May 2019 (14:45 IST)
ದೇಶದಲ್ಲೇ ಕುತೂಹಲ ಮೂಡಿಸಿರುವ ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ ಮೇ 23ಕ್ಕೆ ಪ್ರಕಟವಾಗಲಿದ್ದು,
ಮತ ಎಣಿಕೆಗೆ ಸಕಲ ಸಿದ್ಧತೆಯಲ್ಲಿ ಜಿಲ್ಲಾಡಳಿತ ತೊಡಗಿದೆ.
ಮತ ಎಣಿಕೆಗೆ ಸಕಲ ಸಿದ್ದತೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೊಡಗಿದೆ. ಮಂಡ್ಯ ನಗರದ ಸರ್ಕಾರಿ ಸ್ವಾಯತ್ತ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಪೊಲೀಸ್, ಮಿಲಿಟರಿ ಪೋರ್ಸ್ ಗಳನ್ನ ಭದ್ರತೆಗೆ ಕರೆಸಿಕೊಳ್ಳಲಾಗ್ತಿದೆ.
ಇನ್ನೂ ಕಾಲೇಜಿನ ಮೈದಾನದ ಬಳಿ ಬ್ಯಾರಿಕೇಡ್ ಹಾಗೂ ಕಂಬಗಳನ್ನ ಅಳವಡಿಸಲಾಗ್ತಿದ್ದು, ಅಭ್ಯರ್ಥಿಗಳ ಬೆಂಬಲಿಗರು ಕಾಲೇಜಿನ ಒಳ ಪ್ರವೇಶಿಸದಂತೆ ಭದ್ರತೆ ಕಲ್ಪಿಸಲಾಗ್ತಿದೆ. ಹೆಚ್ಚಿನ ಪೊಲೀಸರನ್ನು ನಿಯೋಜಿಸಿ, ಬೆಂಬಲಿಗರನ್ನು ತಡೆಯಲು ಹಾಗೂ ಮತಣಿಕೆ ಕೇಂದ್ರದ ಬಳಿ ವಿಜಯೋತ್ಸವ ಹಾಗೂ ಪಟಾಕಿ ಸಿಡಿಸದಂತೆ ಕ್ರಮ ಕೈಗೊಳ್ಳಲಾಗ್ತಿದೆ.
ಭದ್ರತೆಯ ಸಿದ್ಧತೆ ಬಲು ಜೋರಾಗಿ ಸಾಗಿದೆ.