Publish Date: Tue, 14 May 2019 (15:30 IST)
Updated Date: Tue, 14 May 2019 (15:37 IST)
ಅನಾಮಧೇಯ ವ್ಯಕ್ತಿಯಿಂದ ಕರೆ ಮಾಡಲಾಗಿದ್ದು, ಅದರಲ್ಲಿ ಮೈಸೂರು ಅರಮನೆಗೆ ಬಾಂಬ್ ಬೆದರಿಕೆ ಹಾಕಲಾಗಿದೆ.
ಮೈಸೂರಿನ ಅರಮನೆಯ ಭದ್ರತಾ ಸಿಬ್ಬಂದಿಗೆ ಬಾಂಬ್ ಕರೆ ಮಾಡಲಾಗಿದೆ. ಬಾಂಬ್ ಇದೆ ಎಂಬ ಮಾಹಿತಿ ಮೇರೆಗೆ ಅರಮನೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಬಾಂಬ್ ಕರೆಯಿಂದ ಶ್ವಾನದಳ ಹಾಗೂ ಬಾಂಬ್ ಸ್ವ್ಕಾಡ್ ನಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅರಮನೆಯ ಎಲ್ಲಾ ದ್ವಾರಗಳಲ್ಲಿಯೂ ಹೈ ಅಲರ್ಟ್ ನಲ್ಲಿಡಲಾಗಿದೆ.
ಶ್ರೀಲಂಕಾದಲ್ಲಿ ಈಚೆಗೆ ನಡೆದ ಸರಣಿ ಬಾಂಬ್ ದಾಳಿಯ ನಂತರ ಕರ್ನಾಟಕದಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಮೈಸೂರಿನ ಅರಮನೆಯಲ್ಲೂ ಭದ್ರತೆ ಹೆಚ್ವಿಸಲಾಗಿದೆ.