Select Your Language

Notifications

webdunia
webdunia
webdunia
webdunia

ಹಣ್ಣಿನ ತೋಟದಲ್ಲಿ ಹೆಚ್ಚಿನ ಫಸಲು ಕಾಣಲು ಶಿವಲಿಂಗಕ್ಕೆ ಇದರಿಂದ ಪೂಜೆ ಮಾಡಿ

ಹಣ್ಣಿನ ತೋಟದಲ್ಲಿ ಹೆಚ್ಚಿನ ಫಸಲು ಕಾಣಲು ಶಿವಲಿಂಗಕ್ಕೆ ಇದರಿಂದ ಪೂಜೆ ಮಾಡಿ
ಬೆಂಗಳೂರು , ಸೋಮವಾರ, 13 ಮೇ 2019 (07:17 IST)
ಬೆಂಗಳೂರು : ಶಿವನು ಭಕ್ತರ ಕಷ್ಟಗಳನ್ನು, ಇಷ್ಟಾರ್ಥಗಳನ್ನು ಬಹಳ  ಬೇಗ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಶಿವನನ್ನು ಹೆಚ್ಚಾಗಿ ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಶಿವಲಿಂಗಕ್ಕೆ ಬೇರೆ ಬೇರೆ ವಸ್ತುಗಳಿಂದ ಪೂಜೆ ಮಾಡಿದರೆ ಬೇರೆ ಬೇರೆ ಫಲಗಳು ದೊರೆಯುತ್ತದೆ ಎನ್ನಲಾಗಿದೆ.




ನಿಮಗೆ ರೋಗಗಳಿಂದ ಮುಕ್ತಿ ಪಡೆಯಬೇಕೆಂದರೆ ಶಿವಲಿಂಗಕ್ಕೆ ಕಲ್ಲು ಸಕ್ಕರೆಯಿಂದ ಪೂಜೆ ಮಾಡಿ. ಹಾಗೇ ಸಂಪತ್ತು ಹಾಗೂ ಸುಖ ಪ್ರಾಪ್ತಿಗಾಗಿ ಗಟ್ಟಿ ಮೊಸರಿನಲ್ಲಿ ಶಿವಲಿಂಗ ಮಾಡಿ ಪೂಜೆ ಮಾಡಬೇಕು. ಶಿವಲಿಂಗದ ಆಕಾರದಲ್ಲಿ ಹಣ್ಣನ್ನು ಇಟ್ಟು ರುದ್ರಾಭಿಷೇಕ ಮಾಡುವುದರಿಂದ ಹಣ್ಣಿನ ತೋಟದಲ್ಲಿ ಹೆಚ್ಚಿನ ಫಸಲು ಕಾಣಬಹುದಾಗಿದೆ. ಹೂವಿನಿಂದ ಮಾಡಿದ ಶಿವಲಿಂಗ ಪೂಜೆ ಮಾಡುವುದ್ರಿಂದ ಭೂ-ಸಂಪತ್ತು ಪ್ರಾಪ್ತಿಯಾಗುತ್ತದೆ.


ಧನ ಹಾಗೂ ಆರೋಗ್ಯ, ಸಂಪತ್ತು ಪ್ರಾಪ್ತಿಯಾಗಲು ಜೋಳ, ಗೋಧಿ ಹಾಗೂ ಅಕ್ಕಿಯನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ ಶಿವಲಿಂಗವನ್ನು  ತಯಾರಿಸಿ ಪೂಜೆ ಮಾಡಿ. ಚಿನ್ನದಿಂದ ಮಾಡಿದ ಶಿವಲಿಂಗ ಪೂಜೆ ಮಾಡುವುದ್ರಿಂದ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮುಕ್ತಿ ಪಡೆಯಲು  ಕರ್ಪೂರದಿಂದ ಶಿವಲಿಂಗದ ಆರಾಧನೆ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಶಿಗೆ ಯಾವ ರಾಶಿಯವರೊಡನೆ ಸ್ನೇಹ ಮೂಡುತ್ತದೆ?