Select Your Language

Notifications

webdunia
webdunia
webdunia
webdunia

ಡೆಡ್ಲಿ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರಿಸಲು ಹೈಕೋರ್ಟ್ ಸೂಚನೆ

ಡೆಡ್ಲಿ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರಿಸಲು ಹೈಕೋರ್ಟ್ ಸೂಚನೆ
bangalore , ಬುಧವಾರ, 12 ಏಪ್ರಿಲ್ 2023 (16:00 IST)
ಬೆಂಗಳೂರಿನ ಯಾವ ಪುಟ್ ಪಾತ್‌ಗಳನ್ನ ನೋಡಿದ್ರು   ಜನರ ಪ್ರಾಣ ಬಲಿ ಪಡೆಯಲು ಸಾಕ್ಷಾತ್ ಯಮನಂತೆ   ಇರುವ ಒಂದಾದರು ಟ್ರಾನ್ಸ್ ಫಾರ್ಮ್ ಗಳು ನೋಡ ಸಿಗುತ್ತವೆ..ಜನರ ಪ್ರಾಣಕ್ಕೆ ಅಪಾಯ ತರುವಂತಿರುವ ಪಾದಚಾರಿ ಮಾರ್ಗಗಳ ಮೇಲೆ ಅಳವಡಿಸಲಾಗಿದ್ದ 2,587 ಟ್ರಾನ್ಸ್ಫಾರ್ಮರ್‌ಗಳನ್ನು ಕಳೆದ ಬಾರಿ ಗುರುತ್ತಿಸಲಾಗಿತ್ತು.ಜನರ ಪ್ರಾಣಕ್ಕೆ ಕುತ್ತು ತರುವ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗದಿಂದ ಬೇರೆಡೆ ಸ್ಥಳಾಂತರಿಸುವಂತೆ ಹೈಕೋರ್ಟ್ ಬೆಸ್ಕಾಂಗೆ ಆದೇಶಿಸಿತ್ತು .
 
ಇನ್ನೂ ನಗರದ ರಸ್ತೆ ಬದಿಗಳಲ್ಲಿರುವ ಫಟ್ ಫಾತ್ ವಿದ್ಯುತ್ ಪ್ರವರ್ತಕಗಳ ಸುತ್ತಮುತ್ತಲ ಭಾಗಗಳಲ್ಲಿ ನೈರ್ಮಲ್ಯ ಕಾಪಾಡಬೇಕು. ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡದಂತೆ ತಡೆಯುವುದಕ್ಕಾಗಿ ಜಾಗೃತಿ ಫಲಕಗಳನ್ನು ಅಳವಡಿಸಬೇಕು ಎಂದು ನ್ಯಾಯಪೀಠ ತಿಳಿಸಿತ್ತು.ಇದೀಗ ಕೋರ್ಟ ಆದೇಶದನ್ವಯ ಬೆಸ್ಕಾಂ ಕಾರ್ಯೊನ್ಮುಕವಾಗಿದೆ.ಬೇರೆಡೆ ಸ್ಥಳಾಂತರಿಸುವ ಕೆಲಸ ಮಾಡುತ್ತಿದೆ.
 
ಅದರಂತೆಯೇ ಕಳೆದ ಮೂರು ನಾಲ್ಕು ವರ್ಷಗಳಿಂದ  ಒಟ್ಟು 3196 ಟ್ರಾನ್ಸ್ಫಾರ್ಮರ್ಗಳನ್ನು ಸ್ಥಳಾಂತರಿಸಿದ್ದೇವೆ ಎಂದು ಬೆಸ್ಕಾಂ ಹೈಕೋರ್ಟ್ಗೆ ಮಾಹಿತಿ ನೀಡಿತ್ತು, ಅದರಂತೆ ಉಳಿದ 676 ಟ್ರಾನ್ಸ್ಫಾರ್ಮರ್‌ಗಳ ಸ್ಥಳಾಂತರ ಕಾರ್ಯವನ್ನು 2023ರ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.
 
ಈ ಹಿಂದೆ ಬೆಂಗಳೂರು ಮಹಾನಗರದ ಪಾದಚಾರಿ ಮಾರ್ಗದಲ್ಲಿ 5,784 ಟ್ರಾನ್ಸ್ಫಾರ್ಮರ್ಗಳಿತ್ತು ಅದನ್ನ ಹಂತ ಹಂತವಾಗಿ‌ ಬೆಸ್ಕಾಂ ಸ್ಥಳಾಂತರ ಮಾಡಿದ್ದು ಇನ್ನುಳಿದ 676 ಟ್ರಾನ್ಸ್ ಫರ್ಮ್ ಸ್ಥಳಾಂತರಕ್ಕೆ ಸಪ್ಟೆಂಬರ್ ವರೆಗೂ ಸಮಯ ಕೇಳಿದ್ದಾರೆ,ಅದೇನೆ ಇರಲಿ  ಸಾರ್ವಜನಿಕರಿಗೆ ತೊಂದರೆಯಾಗದಂತೆ ಆದಷ್ಟು ಬೇಗ ಫುಟ್ ಪಾತ್ ಮೇಲಿನ ಎಲ್ಲಾ ಟ್ರಾನ್ಸ್ ಪಾರ್ಮ್‌ರ್‌ಗಳನ್ನ  ಬೆಸ್ಕಾಂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಿದೆ 

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಅಶೋಕ್ ಪದ್ಮನಾಭ ನಗರದಲ್ಲೂ ಸೋಲ್ತಾರೆ-ಡಿಕೆಶಿ