Publish Date: Tue, 27 Aug 2019 (14:27 IST)
Updated Date: Tue, 27 Aug 2019 (14:28 IST)
ಜಮಖಂಡಿ : ಯಡಿಯೂರಪ್ಪ ಗೋಗೆರೆದು ಮುಖ್ಯಮಂತ್ರಿ ಆಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ ವೈ ಸಿಎಂ ಆಗೋದು ಬಿಜೆಪಿ ಹೈಕಮಾಂಡ್ ಗೆ ಇಷ್ಟವಿರಲಿಲ್ಲ, ಯಡಿಯೂರಪ್ಪ ಗೋಗೆರೆದು ಮುಖ್ಯಮಂತ್ರಿ ಆಗಿದ್ದಾರೆ. ಹಾಗಾಗಿ ಹೈಕಮಾಂಡ್ ಮೂವರು ಡಿಸಿಎಂ ಗಳನ್ನು ನೇಮಕ ಮಾಡಿದೆ ಎಂದು ಹೇಳಿದ್ದಾರೆ.
ಹೈಕಮಾಂಡ್ ಗೆ ಬಿಎಸ್ ವೈ ಯನ್ನ ಮೂಲೆ ಗುಂಪು ಮಾಡುವ ಉದ್ದೇಶವಿದೆ. ಹಾಗಾಗಿ ಬಿಎಸ್ ವೈ ಯನ್ನು ಕಟ್ಟಿಹಾಕಲು ಮೂವರನ್ನು ಡಿಸಿಎಂ ಮಾಡಿರಬಹುದು. ಎಲ್ಲರನ್ನೂ ಸಮಾಧಾನ ಮಾಡೋಕೆ ಡಿಸಿಎಂ ಹುದ್ದೆಕೊಟ್ಟಿದ್ದಾರೆ. ಡಿಸಿಎಂ ಸಾಂವಿಧಾನಿಕ ಹುದ್ದೆ ಅಲ್ಲ ಎಂದು ಅವರು ತಿಳಿಸಿದ್ದಾರೆ.