Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಕೊರೊನಾದಿಂದ ವ್ಯಕ್ತಿ ಸಾವು ಹೈ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಕೊರೊನಾದಿಂದ ವ್ಯಕ್ತಿ ಸಾವು ಹೈ ಅಲರ್ಟ್ ಘೋಷಣೆ
ತುಮಕೂರು , ಶುಕ್ರವಾರ, 27 ಮಾರ್ಚ್ 2020 (16:59 IST)
ಕೊರೋನಾ ಸೋಂಕಿನಿಂದ ಸಿರಾ ಮೂಲದ ವ್ಯಕ್ತಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ತುಮಕೂರು ಜಿಲ್ಲೆಯ ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಈಚೆಗೆ ಬರಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಮೃತ ವ್ಯಕ್ತಿ ಮಾರ್ಚ್ 07 ರಂದು ದೆಹಲಿಯ ಜಾಮೀಯಾ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂಪರ್ಕಕ್ರಾಂತಿ ರೈಲಿನಲ್ಲಿ 13 ಮಂದಿಯೊಂದಿಗೆ ಪ್ರಯಾಣ ಮಾಡಿದ್ದು, ಮಾ.14ರಂದು ಬೆಂಗಳೂರಿಗೆ ಬಂದಿದ್ದು, ಅಲ್ಲಿಂದ ಬಸ್ ಮೂಲಕ ಸಿರಾಗೆ ತಲುಪಿದ್ದರು ಎಂದು ತಿಳಿಸಿದರು.

ದೆಹಲಿಯಿಂದ ಬಂದಿದ್ದ ವ್ಯಕ್ತಿಗೆ ಮಾ.18ರಂದು ಜ್ವರ ಬಂದಿದ್ದು, ಮಾ.21ರಂದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.

 ಮಾ.24ರಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು, ಕೊರೋನಾ ಸೋಂಕಿನ ಬಗ್ಗೆ ಬೆಂಗಳೂರಿನಿಂದ ವರದಿ ಬಂದಿದ್ದು, ಬೆಳಿಗ್ಗೆ 10-45ಕ್ಕೆ ವ್ಯಕ್ತಿಯೂ ಜಿಲ್ಲಾಸ್ಪತ್ರೆಯ ಐಸೋಲೆಟೇಡ್ ನಲ್ಲಿ ಸಾವನ್ನಪ್ಪಿದ್ದಾರೆ ಎಂದರು.

ಮೃತ ವ್ಯಕ್ತಿಯೊಂದಿಗೆ ದೆಹಲಿಗೆ ತೆರಳಿದ್ದ 13 ಮಂದಿ ಹಾಗೂ ಕುಟುಂಬದ ಸದಸ್ಯರನ್ನು ಐಸೋಲೇಟೆಡ್ ಮಾಡಲಾಗಿದೆ.
ಸಿರಾ ಮೂಲದ ವ್ಯಕ್ತಿ ಸಾವನ್ನಪ್ಪಿರುವುದರಿಂದ, ಸಿರಾದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಎಫೆಕ್ಟ್ : ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ