Select Your Language

Notifications

webdunia
webdunia
webdunia
webdunia

ಇನ್ಮುಂದೆ ರಾಜ್ಯದಲ್ಲಿ ಗಾಳಿಪಟಕ್ಕೆ ಬಳಸುವ ಗಾಜಿನಪುಡಿ ಸಹಿತ ಮಾಂಜಾ ಹಾರ ನಿಷೇಧ

ಇನ್ಮುಂದೆ ರಾಜ್ಯದಲ್ಲಿ ಗಾಳಿಪಟಕ್ಕೆ ಬಳಸುವ ಗಾಜಿನಪುಡಿ ಸಹಿತ ಮಾಂಜಾ ಹಾರ ನಿಷೇಧ

Sampriya

ಬೆಂಗಳೂರು , ಸೋಮವಾರ, 4 ನವೆಂಬರ್ 2024 (16:18 IST)
Photo Courtesy X
ಬೆಂಗಳೂರು: ಉತ್ತರ ಭಾರತದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಗಾಳಿಪಟಕ್ಕೆ ಬಳಸುವ 'ಮಾಂಜಾದಾರ'ದ ಕುರಿತು ಕರ್ನಾಟಕ ಸರ್ಕಾರ ಸೋಮವಾರ ಮಹತ್ವದ ನಿರ್ಣಯ ಕೈಗೊಂಡಿದೆ.

ಇದೀಗ ಪ್ರಾಣಿಪ್ರಿಯರ ಸಲಹೆಗಳನ್ನು ಸ್ವೀಕರಿಸಿ, ಮಾನವರು, ಪಕ್ಷಿಗಳು ಮತ್ತು ಪರಿಸರಕ್ಕೆ ಹಾನಿಯನ್ನು ತಡೆಯಲು ಗಾಳಿಪಟ ಹಾರಿಸಲು ಬಳಸುವ ಲೋಹ ಅಥವಾ ಗಾಜಿನ ಲೇಪಿತ ದಾರ ಅಥವಾ ಮಾಂಜಾದಾರ ಬಳಸುವುದನ್ನು ರಾಜ್ಯ ಸರ್ಕಾರ ನಿಷೇಧ ಮಾಡಿ ಆದೇಶಿಸಿದೆ.

ಅದರಂತೆ ಇನ್ಮುಂದೆ ಗಾಜಿನಪುಡಿ ಅಥವಾ ಲೋಹೀಯ ಘಟಕ ರಹಿತ ದಾರವನ್ನು ಮಾತ್ರ ಗಾಳಿಪಟ ಹಾರಿಸಲು ಅನುಮತಿಸಲಾಗಿದೆ. ಈ ಹಿಂದೆ ನೈಲಾನ್ "ಚೈನೀಸ್" ಮಾಂಜಾಗೆ ಮಾತ್ರ ಸೀಮಿತವಾಗಿದ್ದ ನಿಷೇಧವನ್ನು ಗಾಜಿನ ಅಥವಾ ಲೋಹದ ಪುಡಿ ಲೇಪಿತ ದಾರಗಳಿಗೂ ನಿಷೇಧ ಅನ್ವಯಿಸಲು ಸರ್ಕಾರ ಅಧಿಸೂಚನೆ ಮೂಲಕ ತಿಳಿಸಿದೆ.

ಪರಿಸರ (ಸಂರಕ್ಷಣೆ) ಕಾಯಿದೆ (ಇಪಿಎ), 1986 ರ ಸೆಕ್ಷನ್ 5 ರ ಅಡಿಯಲ್ಲಿ ಸರ್ಕಾರವು ತನ್ನ ಅಧಿಸೂಚನೆಗೆ ತಿದ್ದುಪಡಿಯನ್ನು ತಂದು ಆದೇಶ ಹೊರಡಿಸಿದ್ದು, ಈಗ "ಯಾವುದೇ ಚೂಪಾದ, ಲೋಹೀಯ ಅಥವಾ ಗಾಜಿನ ಪುಡಿ, ಅಂಟುಗಳು ಅಥವಾ ಇತರ ಯಾವುದೇ ವಸ್ತುಗಳು ಅಂದರೆ ದಾರವನ್ನು ಬಲಪಡಿಸುವ ಸಾಮಗ್ರಿ ಲೇಪಿತ ಮಾಂಜಾದಾರವನ್ನು ನಿಷೇಧಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ ನನಗೆ ಇನ್ನೂ ಹೆಚ್ಚು ಶಕ್ತಿ ಬರುತ್ತೆ: ಸಿದ್ದರಾಮಯ್ಯ