Publish Date: Tue, 12 Nov 2019 (15:43 IST)
Updated Date: Tue, 12 Nov 2019 (15:52 IST)
ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಗೆ ಪರೋಕ್ಷವಾಗಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಭರ್ಜರಿಯಾಗಿ ಟಾಂಗ್ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ತರಾಸು ರಂಗಮಂದಿರದಲ್ಲಿ ನಡೆದ ಖಾಸಗಿ ಕಾರ್ಯಕ್ರಮ ದಲ್ಲಿ ಮಾತನಾಡಿದ್ದಾರೆ.
ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕುತ್ತೀರಾ? ನಾಚಿಕೆ ಆಗಲ್ವಾ? ಅಂತ ಪ್ರಶ್ನೆ ಮಾಡಿದ್ದಾರೆ.
ಯಾವ ರೀತಿಯಲ್ಲಿ ಶ್ರೀಮಂತನಿದ್ದಾನೆ. ಯಾವ ರೀತಿ ಅಧಿಕಾರಕ್ಕೆ ಆತ ಬಂದ ಎಂಬ ತಿಳುವಳಿಕೆ ಇರಬೇಕು ಅಂತ ಹೇಳೋ ಮೂಲಕ ಡಿಕೆ ಶಿವಕುಮಾರ್ ಗೆ ಪರೋಕ್ಷ ಟಾಂಗ್ ನೀಡಿದ್ರು. ತಿಳುವಳಿಕೆ ತಿಳಿದಂತಹ ವ್ಯಕ್ತಿಗಳಿಗೆ ನಮಸ್ಕಾರ ಮಾಡಿ, ಸಲಾಂ ಹೊಡಿಬೇಡಿ.
ಇವತ್ತು ಸಮಾಜದಲ್ಲಿ ಏನೂ ನೋಡುತ್ತಿದ್ದೇವೆ.
ಜೈಲಿಗೆ ಹೋಗಿ ಬಂದ ವ್ಯಕ್ತಿಗಳಿಗೆ ಹಾರ ಹಾಕುವ ಸಮಾಜದಲ್ಲಿದ್ದೇವೆ. ಅಂತಹವರಿಗೆ ಚಪ್ಪಾಳೆ ಹೊಡೆಯಬೇಡಿ, ನಮಸ್ಕಾರ ಮಾಡಬೇಡಿ.
ಗಂಭೀರವಾಗಿ ಯೋಚನೆ ಮಾಡಿ, ಇನ್ನೂ ಕೇಸ್ ಕೋರ್ಟ್ ನಲ್ಲಿದೆ. ಆತ ನಿರಪರಾಧಿ ಎಂದು ಕೋರ್ಟ್ ಹೇಳಿಲ್ಲ. ಜಾಮೀನು ಸಿಕ್ಕು ಬಂದಿದ್ದಾನೆ. ಅಂಥವರಿಗೆ ಅಷ್ಟು ದೊಡ್ಡ ಸೇಬಿನ ಹಾರ ಹಾಕುತ್ತೀರಾ? ನಾಚಿಕೆ ಆಗಲ್ವಾ? ಎಂದು ಜನರಿಗೆ ಪ್ರಶ್ನೆ ಮಾಡಿದ್ದಾರೆ ಸಂತೋಷ್ ಹೆಗ್ಡೆ.