Select Your Language

Notifications

webdunia
webdunia
webdunia
webdunia

ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚರಿಸುವವರ ಗಮನಕ್ಕೆ: ಶನಿವಾರದವರೆಗೂ ರಾತ್ರಿ ಬಂದ್

Hebbal flyover

Krishnaveni K

ಬೆಂಗಳೂರು , ಗುರುವಾರ, 19 ಜೂನ್ 2025 (14:32 IST)
Photo Credit: X
ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಮಾರ್ಗವಾಗಿ ಯಲಹಂಕ ಅಥವಾ ಏರ್ ಪೋರ್ಟ್ ಗೆ ಸಂಚರಿಸುವವರ ವಿಶೇಷ ಗಮನಕ್ಕೆ ಈ ಸೂಚನೆ. ಹೆಬ್ಬಾಳ ಮೇಲ್ಸೇತುವೆ ಶನಿವಾರದವರೆಗೂ ರಾತ್ರಿ ಬಂದ್ ಆಗಲಿದ್ದು, ಪರ್ಯಾಯ ಮಾರ್ಗದ ವಿವರ ಇಲ್ಲಿದೆ ನೋಡಿ.

ಹೆಬ್ಬಾಳ ಮೇಲ್ಸೇತುವೆಯಲ್ಲಿ ಬಿಬಿಎಂಪಿ ಕಾಮಗಾರಿ ನಡೆಯುತ್ತಿರುವ ಕಾರಣಕ್ಕೆ ರಾತ್ರಿ ಸಂಚಾರ ನಿರ್ಬಂಧಿಸಲಾಗಿದೆ. ಇದರ ಬದಲಾಗಿ ಪ್ರಯಾಣಿಕರಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಶನಿವಾರದವರೆಗೂ ಈ ಅನಾನುಕೂಲತೆಯಿರಲಿದೆ. ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಡಾಮರೀಕರಣ ಕೆಲಸದ ನಿಮಿತ್ತ ಮೇಲ್ಸೇತುವೆ ಬಂದ್ ಆಗಿರಲಿದೆ.

ಪರ್ಯಾಯ ಮಾರ್ಗ  ಯಾವುದು?
ಯಲಹಂಕ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರು ಮೇಲ್ಸೇತುವೆಯ ಕೆಳಗಿನ ಸರ್ವಿಸ್ ರಸ್ತೆ ಬಳಸಿ ಹೆಬ್ಬಾಳ ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ ಭದ್ರಪ್ಪ ಲೇ ಔಟ್ ಕಡೆಯಿಂದ ನ್ಯೂ ಬಿಇಎಲ್ ರಸ್ತತೆ ಮತ್ತು ಮೇಖ್ರಿ ರಸ್ತೆ ಮೂಲಕ ತೆರಳಬಹುದು.

ಎರಡು ದಿನದಲ್ಲಿ ಕಾಮಗಾರಿ ಮುಗಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ ಮಳೆ ಬಂದು ಕೆಲಸಕ್ಕೆ ಅಡಚಣೆಯಾದಲ್ಲಿ ಮತ್ತಷ್ಟು ದಿನ ಕೆಲಸ ನಡೆಯುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Plane Crash: ಸ್ವಗೃಹಕ್ಕೆ ಮಂಗಳೂರು ಮೂಲದ ಕೋ ಪೈಲಟ್ ಕ್ಲೈವ್ ಕುಂದರ್ ಮೃತದೇಹ